ಫೇಸ್ ಬುಕ್ ಗ್ರೂಪ್ ಅಡ್ಮಿನ್ ಗಳಿಗೆ ಸಿಗಲಿದೆ ಹೆಚ್ಚು ಅಧಿಕಾರ

ಮಂಗಳವಾರ, 31 ಅಕ್ಟೋಬರ್ 2017 (17:30 IST)
ನವದೆಹಲಿ: ಫೇಸ್‌ ಬುಕ್ ಗ್ರೂಪ್ ಕ್ರಿಯೇಟ್ ಮಾಡುವ ಅಡ್ಮಿನ್‌ ಗಳಿಗೆ ಹೆಚ್ಚು ಅಧಿಕಾರ ನೀಡುವ ಫೀಚರ್ ಬಿಡುಗಡೆ ಮಾಡಿದೆ.

ಸಾಮಾಜಿಕ ತಾಣ ಫೇಸ್‌ ಬುಕ್ ಈಗ ಹೊಸ ಟೂಲ್ ವೊಂದನ್ನು ಪರಿಚಯಿಸಿದ್ದು, ಇದನ್ನು ಬಳಸಿಕೊಂಡು ಗ್ರೂಪ್ ಅಡ್ಮಿನ್‌ ಗಳು ಗ್ರೂಪ್ ಸದಸ್ಯರ ಕಾಮೆಂಟ್‌ಗಳನ್ನು ನಿಷೇಧಿಸಬಹುದಾಗಿದೆ. ಹೀಗೆ ಮಾಡುವುದರಿಂದ ಆ ಗ್ರೂಪ್‌ ನಲ್ಲಿ ಅವರು ಯಾವುದೇ ಕಾರಣಕ್ಕೂ ಕಮೆಂಟ್ ಮಾಡಲು ಆಗುವುದಿಲ್ಲವಂತೆ.

ಫೇಸ್‌ ಬುಕ್ ಅಡ್ಮಿನ್‌ ಗಳು ಒಂದು ಕ್ಲಿಕ್ ಮಾಡುವ ಮೂಲಕ ತಮ್ಮ ಸಮುದಾಯದ ನಿಯಮಗಳನ್ನು ಉಲ್ಲಂಘಿಸುವ ಸದಸ್ಯರನ್ನು ಗ್ರೂಪ್ ನಿಂದ ತೆಗೆಯುವ ಹಾಗೂ ಅವರು ಯಾವುದೇ ಕಮೆಂಟ್ ಮಾಡದಂತೆ ನಿಷೇಧಿಸುವ ಅಧಿಕಾರ ಹೊಂದಿರುವುದಾಗಿ ಫೇಸ್‌ ಬುಕ್ ಹೇಳಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಆಯ್ಕೆ ಲಭ್ಯವಾಗಲಿದೆ.

ಇನ್ನು ಗ್ರೂಪ್ ಅಡ್ಮಿನ್‌ ಗಳು ಹೊಸದಾಗಿ ಗ್ರೂಪ್ ಸೇರುವ ಸದಸ್ಯರಿಗೆ ಸ್ವಾಗತ ಕೋರಲು ಸಹ ಫೀಚರ್ ಅಪ್‌ ಡೇಟ್ ಆಗಿದ್ದು, ಸ್ವಾಗತ ಕೋರುವ ಪೋಸ್ಟ್ ಗ್ರೂಪ್‌ ಗೆ ಹೊಸದಾಗಿ ಸೇರಿದ ಸದಸ್ಯರಿಗೆ ಆಟೋಮ್ಯಾಟಿಕ್ ಆಗಿ ಟ್ಯಾಗ್ ಆಗುತ್ತದೆ ಎಂದು ಫೇಸ್‌ಬುಕ್ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ