ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಇಂದು ಅತೀ ದೊಡ್ಡ ತಿರುವು ಸಿಕ್ಕಿದೆ. ಮಾಸ್ಕ್ ಮ್ಯಾನ್ ಮುಖವಾಡ ಕಳಚಿಬಿದ್ದಿದ್ದು ಇಷ್ಟು ದಿನದ ಶೋಧದ ಹೈಡ್ರಾಮಾಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮಾಸ್ಕ್ ಹಾಕಿಕೊಂಡು ಬಂದ ವ್ಯಕ್ತಿಯೊಬ್ಬ ದೂರು ನೀಡಿದ್ದ. ಅದರ ಬೆನ್ನಲ್ಲೇ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶಿಸಿತ್ತು. ಎರಡು ವಾರಗಳಿಂದ ಆತ ಹೇಳಿದಲ್ಲೆಲ್ಲಾ ಮಣ್ಣು ಅಗೆದು ಶೋಧ ನಡೆಸಿದರೂ ಅಸ್ಥಿಪಂಜರ ಸಿಕ್ಕಿರಲಿಲ್ಲ.
ಹೀಗಾಗಿ ವಿಪಕ್ಷಗಳು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಸರ್ಕಾರವೂ ಶೋಧ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿತ್ತು. ಇದೀಗ ಎಸ್ಐಟಿ ತಂಡ ಮಾಸ್ಕ್ ಮ್ಯಾನ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ವೇಳೆ ದೊಡ್ಡ ರಹಸ್ಯ ಬಯಲಾಗಿದೆ.
ಆ ಒಂದು ಗುಂಪು ಹೇಳಿದ್ದಕ್ಕೆ ನಾನು ಆ ರೀತಿ ಹೇಳಿಕೆ ನೀಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. 2014 ರಿಂದ ನಾನು ತಮಿಳುನಾಡಿನಲ್ಲಿದ್ದೆ. 2023 ರಲ್ಲಿ ಒಂದು ಗುಂಪು ಬಂದು ಧರ್ಮಸ್ಥಳದಲ್ಲಿ ಶವ ಹೂತಿದ್ದರ ಬಗ್ಗೆ ಕೇಳಿದ್ದರು. ಆಗ ನಾನು ಎಲ್ಲವನ್ನೂ ಕಾನೂನಾತ್ಮಕವಾಗಿ ಶವ ಹೂತಿದ್ದಾಗಿ ಹೇಳಿದ್ದೆ. ಆದರೆ ಆ ಗುಂಪು ಇಲ್ಲ ಎಲ್ಲವೂ ಅಕ್ರಮವಾಗಿ ನಡೆದಿದ್ದು ಎಂದು ಹೇಳು ಎಂದು ಒತ್ತಾಯಿಸಿತ್ತು.
ಒಂದೂವರೆ ವರ್ಷ ಒತ್ತಾಯಿಸಿದ ಬಳಿಕ ದೂರು ನೀಡಲು ಬಂದೆ. ಆಗಲೂ ನನಗೆ ಭಯವಿತ್ತು. ಆದರೆ ಸುಜಾತ ಭಟ್ ಎಂಬ ಮಹಿಳೆ ತಮ್ಮ ಮಗಳು ಕಾಣೆಯಾಗಿದ್ದಳು ಎಂದು ದೂರು ನೀಡಿದ ಬಳಿಕ ನನಗೆ ಸ್ವಲ್ಪ ಧೈರ್ಯ ಬಂತು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆ ಮೂಲಕ ಮಾಸ್ಕ್ ಮ್ಯಾನ್ ಹಿಂದೆ ದೊಡ್ಡ ಷಡ್ಯಂತ್ರವೇ ನಡೆದಿದೆ ಎನ್ನುವುದು ಬಯಲಾಗಿದೆ.