ಬೀಜಿಂಗ್ : ಕಳೆದೆರಡು ದಿನದ ಹಿಂದೆ ಚೀನಾದ ಅತಿದೊಡ್ಡ ಐಫೋನ್ ಕಾರ್ಖಾನೆಯಲ್ಲಿ ಕಾರ್ಮಿಕರು ಭಾರೀ ಪ್ರತಿಭಟನೆ ನಡೆಸಿದ್ದು, ಪೊಲೀಸರೊಂದಿಗೆ ತೀವ್ರವಾದ ವಾಗ್ವಾದ ನಡೆದು,
ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿತ್ತು. ಇದೀಗ ಘರ್ಷಣೆಯಾದ ಬೆನ್ನಲ್ಲೇ ಐಫೋನ್ ಕಾರ್ಖಾನೆಯ ನೆಲೆಯಾಗಿರುವ ಝೆಂಗ್ಝೌ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಕೋವಿಡ್ ಲಾಕ್ಡೌನ್ ವಿಸ್ತರಿಸಲಾಗಿದೆ.
ವರದಿ ಪ್ರಕಾರ ನಗರದ ಪ್ರಾಧಿಕಾರ ಬುಧವಾರ ಸಂಜೆ ಡೌನ್ಟೌನ್ ಪ್ರದೇಶದ ನಿವಾಸಿಗಳನ್ನುದ್ದೇಶಿಸಿ ಮಾತನಾಡಿದ್ದು, ಶುಕ್ರವಾರದಿಂದ ಮುಂದಿನ ಮಂಗಳವಾರದ ವರೆಗೆ ತಮ್ಮ ಮನೆಯಲ್ಲಿಯೇ ಇರುವಂತೆ ಕೇಳಿಕೊಂಡಿದೆ. ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆ ಈ ಆದೇಶವನ್ನು ನೀಡಲಾಗಿರುವುದಾಗಿ ತಿಳಿಸಲಾಗಿದೆ.