ಆರ್ಥಿಕ ಬಿಕ್ಕಟ್ಟು : ಐವರು ಹಣಕಾಸು ಸಚಿವರ ರಾಜೀನಾಮೆ

ಮಂಗಳವಾರ, 27 ಸೆಪ್ಟಂಬರ್ 2022 (10:18 IST)
ಇಸ್ಲಾಮಾಬಾದ್ : ಆರ್ಥಿಕ ಬಿಕ್ಕಟ್ಟು, ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ವಿತ್ತ ಸಚಿವರು ಬದಲಾಗುತ್ತಲೇ ಇದ್ದಾರೆ. ಯಾರೊಬ್ಬರು ಕೂಡ ಹೆಚ್ಚು ಕಾಲ ಹಣಕಾಸುವ ಸಚಿವ ಸ್ಥಾನದಲ್ಲಿ ಉಳಿಯುತ್ತಿಲ್ಲ.

ಇದೀಗ ವಿತ್ತ ಸಚಿವ ಇಸ್ಮಾಯಿಲ್ ಕೂಡ ರಾಜೀನಾಮೆ ನೀಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 5ನೇ ಹಣಕಾಸು ಸಚಿವರು ರಾಜೀನಾಮೆ ನೀಡಿದಂತಾಗಿದೆ. 

ಇದೇ ವೇಳೆ ಲಂಡನ್ ಪ್ರವಾಸದಲ್ಲಿರುವ ಪಾಕ್ ಮಾಹಿತಿ ಸಚಿವೆ ಮರಿಯಂ ಔರಂಗಜೇಬ್ಗೆ ಪಾಕಿಸ್ತಾನಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಫಿ ಶಾಪ್ ಒಂದಕ್ಕೆ ಮರಿಯಂ ತೆರಳಿದ್ದ ಸಂದರ್ಭದಲ್ಲಿ ಆಕೆಯನ್ನು ಸುತ್ತುವರಿದ ಲಂಡನ್ನಲ್ಲಿ ನೆಲೆಸಿರುವ ಪಾಕಿಸ್ತಾನಿಯರು ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ