ಕೆಫೆಯಲ್ಲಿ ಬೆಂಕಿ ಅವಘಡ! 13 ಸಾವು, 250 ಮಂದಿ ಸ್ಥಳಾಂತರ

ಭಾನುವಾರ, 6 ನವೆಂಬರ್ 2022 (14:53 IST)
ಮಾಸ್ಕೋ :  ರಷ್ಯಾದ ಕೊಸ್ಟ್ರೋಮಾ ನಗರದ ಕೆಫೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 13 ಮಂದಿ ಸಾವಿಗೀಡಾಗಿದ್ದು, ಅವಘಡದಲ್ಲಿ ಸಿಲುಕಿದ್ದ 250ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಬೆಂಕಿ ದುರಂತಕ್ಕೆ 13 ಜನರು ಬಲಿಯಾಗಿದ್ದಾರೆ ಎಂಬುದು ಪ್ರಾಥಮಿಕ ವರದಿ ಮಾಹಿತಿಯಿಂದ ತಿಳಿದುಬಂದಿದೆ ಎಂದು ಸ್ಥಳೀಯ ಗವರ್ನರ್ ಸೆರ್ಗೆಯ್ ಸಿಟ್ನಿಕೋವ್ ಟೆಲಿಗ್ರಾಮ್ನಲ್ಲಿ ತಿಳಿಸಿದ್ದಾರೆ.

ಮಾಸ್ಕೋದ ಈಶಾನ್ಯಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ನಗರದಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡಾಗ ಕಟ್ಟಡದಿಂದ 250 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ