ನವದೆಹಲಿ : ಉಕ್ರೇನ್ನೊಂದಿಗಿನ ಸಂಘರ್ಷವನ್ನು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಬಗೆಹರಿಸಬೇಕು.
ಆದರೆ ಅಣ್ವಸ್ತ್ರವನ್ನು ಯಾರು ಕೂಡಾ ಆಶ್ರಯಿಸಬಾರದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾದ ಸಹವರ್ತಿ ಸರ್ಗೆಯ್ ಶೋಯಿಗು ಅವರಿಗೆ ಸಲಹೆ ನೀಡಿದ್ದಾರೆ.
ಬುಧವಾರ ದೂರವಾಣಿ ಮೂಲಕ ಉಭಯ ರಾಷ್ಟ್ರಗಳ ರಕ್ಷಣಾ ಸಚಿವರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಶೋಯಿಗು ಅವರು ಉಕ್ರೇನ್ನಲ್ಲಿ ನಡೆಸುತ್ತಿರುವ ತಮ್ಮ ಕಾರ್ಯಾಚರಣೆಯ ಬಗ್ಗೆ ಸಿಂಗ್ಗೆ ವಿವರಿಸಿದ್ದಾರೆ.
ಈ ವೇಳೆ ರಾಜನಾಥ್ ಸಿಂಗ್ ಯುದ್ಧವನ್ನು ಮಾತುಕತೆ ಮೂಲಕ ಬಗೆಹರಿಸುವಂತೆ ಸಲಹೆ ನೀಡಿರುವುದಾಗಿ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಮಾತುಕತೆಯ ವೇಳೆ ರಾಜನಾಥ್ ಸಿಂಗ್ ಅಣ್ವಸ್ತ್ರ ಬಳಕೆಯಿಂದ ಮುಂದಾಗಬಹುದಾದಂತಹ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಘರ್ಷಣೆಯ ಪರಿಹಾರಕ್ಕೆ ಮಾತುಕತೆ ಹಾಗೂ ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸುವ ಅಗತ್ಯತೆಯನ್ನು ಸಿಂಗ್ ಪುನರುಚ್ಚರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.