ರಷ್ಯಾದ ಶಾಪಿಂಗ್ ಮಾಲ್ ನಲ್ಲಿ ಅಗ್ನಿ ದುರಂತ; 37 ಮಂದಿ ಬಲಿ!

ಸೋಮವಾರ, 26 ಮಾರ್ಚ್ 2018 (12:35 IST)
ಕೆಮರಾವ್‌: ರಷ್ಯಾದ ಕೆಮೆರೊವೊ ಎಂಬಲ್ಲಿರುವ ಶಾಪಿಂಗ್ ಮಾಲಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 37ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.


ಮಾಲ್ ನ ಮೊದಲ ಮಹಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕಾರಣ ತಿಳಿದುಬಂದಿಲ್ಲ. 4 ಮಹಡಿಗಳ ಕಟ್ಟಡದಲ್ಲಿ ಏಕಾಏಕಿ ಬೆಂಕಿ ವ್ಯಾಪಿಸಿದ್ದು ಒಳಗಿದ್ದ ನೂರಾರು ಗ್ರಾಹಕರು ದಿಕ್ಕಾಪಾಲಾಗಿ ಓಡಿದ್ದಾರೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ.


ಮೃತರಲ್ಲಿ 15 ಕ್ಕೂ ಹೆಚ್ಚು ಮಂದಿ ಪುಟ್ಟ ಮಕ್ಕಳು ಎಂದು ಮಾಧ್ಯಮಗಳು ವರದಿ ಮಾಡಿವೆ. 



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ