ಮತ್ತೆ ಅಧಿಕಾರದ ಗದ್ದುಗೆಗೆ ಏರಿದ ಪುಟಿನ್; ನಾಲ್ಕನೇ ಅವಧಿಗೆ ರಷ್ಯಾ ಅಧ್ಯಕ್ಷ ಸ್ಥಾನ
ಮಂಗಳವಾರ, 20 ಮಾರ್ಚ್ 2018 (07:26 IST)
ಮಾಸ್ಕೊ: ವ್ಲಾಡಿಮಿರ್ ಪುಟಿನ್ ನಾಲ್ಕನೇ ಅವಧಿಗೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಗೆಲುವಿನ ಬೆನ್ನಲ್ಲೇ ವಿಶ್ವ ನಾಯಕರು ದೂರವಾಣಿ ಕರೆ ಹಾಗೂ ಟ್ವಿಟರ್ ಮೂಲಕ ಪುಟಿನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮತ್ತೆ ಮುಂದಿನ 6 ವರ್ಷಗಳ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಅವರ ಪ್ರತಿಸ್ಪರ್ಧಿ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಪಾವೆಲ್ ಗ್ರುಡಿನಿನ್ ಶೇಕಡಾ 13 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಇನ್ನು ನ್ಯಾಷನಲಿಸ್ಟ್ ಪಕ್ಷದ ವ್ಲಾಡಿಮಿರ್ ಝಿರಿನೊವ್ಸ್ಕಿ ಶೇಕಡಾ 6 ಮತಗಳನ್ನು ಮಾತ್ರ ಪಡೆದಿದ್ದಾರೆ.
ಭಾನುವಾರವಷ್ಟೇ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆದಿತ್ತು. ಭಾರಿ ಉತ್ಸಾಹದಿಂದ ಜನರು ಪಾಲ್ಗೊಂಡಿದ್ದರಿಂದ ಭರ್ಜರಿ ಮತದಾನವಾಗಿತ್ತು. ಮನೆಝನ್ಯಾ ಸ್ಕ್ವಾರ್ ನಲ್ಲಿ ಸಾವಿರಾರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪುಟನ್ ಚುನಾವಣಾ ಫಲಿತಾಂಶಕ್ಕಾಗಿ ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ