ಅಬು ಧಾಬಿಯಲ್ಲಿ ನಿರ್ಮಾಣವಾಗುತ್ತಿದೆ ಮೊದಲ ಹಿಂದೂ ದೇವಸ್ಥಾನ
ಬುಧವಾರ, 12 ಅಕ್ಟೋಬರ್ 2016 (16:27 IST)
ಭಾರತೀಯ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಯೂರಿರುವ ಅಬುಧಾಬಿಯಲ್ಲಿ ಪ್ರಥಮ ಹಿಂದೂ ದೇವಾಲಯ ನಿರ್ಮಾಣವಾಗುತ್ತಿದೆ. 2017ರ ಅಂತ್ಯದೊಳಗೆ ಈ ದೇವಸ್ಥಾನ ತಲೆ ಎತ್ತಲಿದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಿಂದೂ ದೇವಸ್ಥಾನ ನಿರ್ಮಿಸಲು ಜಾಗ ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿತ್ತು.
ಇಲ್ಲಿಯವರೆಗೆ ಹಿಂದೂಗಳು ಯುಎಇಯ ಪ್ರವಾಸೋದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿರುವ ದುಬೈಗೆ ( ಅಬುಧಾಬಿಯಿಂದ 60ಕೀಮಿ ದೂರ) ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.
ಭಾರತೀಯ ಮೂಲದ ಮಿಲೇನಿಯರ್ ಉದ್ಯಮಿ ಬಿ. ಆರ್.ಶೆಟ್ಟಿ ನೂತನವಾಗಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ಅಧ್ಯಕ್ಷರಾಗಿದ್ದಾರೆ. ಯುಎಇಯಲ್ಲಿ ವಿಭಿನ್ನ ದೇಶಗಳ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈ ದೇಶ ಧಾರ್ಮಿಕ ಸಹಿಷ್ಣುತೆಗೆ ಅತ್ಯಂತ ದೊಡ್ಡ ಉದಾಹರಣೆಯಾಗಿದೆ ಎನ್ನುತ್ತಾರೆ ಶೆಟ್ಟಿ.