ಆಹಾರ, ಹಣ, ಆಯುಧಗಳ ನೆರವು: ಬೈಡನ್

ಮಂಗಳವಾರ, 15 ಮಾರ್ಚ್ 2022 (09:10 IST)
ವಾಷಿಂಗ್ಟನ್ : 20ನೇ ದಿನಕ್ಕೆ ಕಾಲಿಟ್ಟಿರುವ ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ಗೆ ಆಯುಧಗಳು, ಆಹಾರ ಮತ್ತು ಹಣದ ರೂಪದಲ್ಲಿ ಬೆಂಬಲ ನೀಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ಉಕ್ರೇನ್ನ ಮೇಲೆ ರಷ್ಯಾ ದಾಳಿ ತಾರಕಕ್ಕೆ ಏರುತ್ತಿದ್ದು, ಈ ಬಗ್ಗೆ ಅನೇಕ ರಾಷ್ಟ್ರಗಳು ವಿರೋಧವನ್ನು ವ್ಯಕ್ತಪಡಿಸಿದೆ. ಅದರಲ್ಲೂ ಪ್ರಮುಖವಾಗಿ ಅಮೆರಿಕ ಮೊದಲನಿಂದಲೂ ವಿರೋಧವನ್ನು ವ್ಯಕ್ತಪಡಿಸುತ್ತಿದೆ.

ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಟ್ವೀಟ್ ಮಾಡಿ, ಉಕ್ರೇನಿನ ಜನರು ಯುದ್ಧದಿಂದ ಹಾನಿಯಾದ ಪ್ರದೇಶಗಳನ್ನು ತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಾಶ್ರಿತರನ್ನು ನಾವು ಸ್ವಾಗತಿಸಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.

ರಷ್ಯಾವನ್ನು ಎದುರಿಸಲು ಉಕ್ರೇನ್ನ ಬಳಿ ಸಾಕಷ್ಟು ಶಸ್ತ್ರಗಳಿವೆಯೇ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳುತ್ತಿದ್ದೇವೆ. ಜೊತೆಗೆ ಅಲ್ಲಿನ ನಾಗರಿಕರ ಜೀವವನ್ನು ಉಳಿಸಲು ಹಣ ಮತ್ತು ಆಹಾರವನ್ನು ಕಳಿಸುತ್ತೇವೆ. ಅಲ್ಲದೆ ಉಕ್ರೇನ್ನ ನಿರಾಶ್ರಿತರನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. 

ನಿನ್ನೆ ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾ ತನ್ನ ಯುದ್ಧವನ್ನು ಮುಂದುವರಿಸಲು ಡ್ರೋನ್ಗಳು ಸೇರಿದಂತೆ ಮಿಲಿಟರಿ ನೆರವು ನೀಡುವಂತೆ ರಷ್ಯಾ ಚೀನಾವನ್ನು ಕೇಳಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ