ಉಕ್ರೇನ್‍ಗೆ ಆರ್ಥಿಕ ನೆರವು ನೀಡಿದ ಅಮೆರಿಕ

ಭಾನುವಾರ, 13 ಮಾರ್ಚ್ 2022 (11:52 IST)
ವಾಷಿಂಗ್ಟನ್ : ಉಕ್ರೇನ್ನಲ್ಲಿ ಕಳೆದ 18 ದಿನಗಳಿಂದ ಯುದ್ಧ ಮಾಡುತ್ತಿರುವ ರಷ್ಯಾ ತನ್ನ ಪ್ರಾಬಲ್ಯ ಮೆರೆಯುತ್ತಿದೆ.

ಈ ನಡುವೆ ಉಕ್ರೇನ್ಗೆ ಅಮೆರಿಕ 200 ಮಿಲಿಯನ್ ಡಾಲರ್ (1,496 ಕೋಟಿ ರೂ.) ಆರ್ಥಿಕ ನೆರವನ್ನು ನೀಡಿದೆ. ರಷ್ಯಾ ವಿರುದ್ಧ ಉಕ್ರೇನ್ ಪ್ರಬಲ ಹೋರಾಟ ಮುಂದುವರಿಸಿದೆ. ರಷ್ಯಾ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಉಕ್ರೇನ್ಗೆ ಅಮೆರಿಕ ಬೆಂಬಲ ನೀಡಿದೆ.

ಇದೀಗ ವಿಶ್ವದ ದೊಡ್ಡಣ್ಣ ಉಕ್ರೇನ್ಗೆ ಆರ್ಥಿಕ ಮತ್ತು ಶಸ್ತಾಸ್ತ್ರ ಪೂರೈಸಲು ಮುಂದಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಂದು ಉಕ್ರೇನ್ಗೆ ಆರ್ಥಿಕ ಮತ್ತು ಶಸ್ತಾಸ್ತ್ರಗಳ ಪೂರೈಕೆಗೆ ನೆರವಾಗಲು 200 ಮಿಲಿಯನ್ ಡಾಲರ್ ನೀಡುತ್ತಿದ್ದೇನೆ ಎಂದು ವೈಟ್ಹೌಸ್ನಲ್ಲಿ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ