`ಡಯಾನಾ ಅಪಘಾತದಲ್ಲಿ ಸತ್ತಿಲ್ಲ, ಕೊಂದಿದ್ದು ನಾನೇ’

ಗುರುವಾರ, 22 ಜೂನ್ 2017 (11:36 IST)
ಬ್ರಿಟನ್ ರಾಜಕುಮಾರಿ ಡಯಾನಾ ಸಾವಿನ ಕುರಿತಂತೆ ದಿನಕ್ಕೊಂದು ಸುದ್ದಿ ಬರುತ್ತಿದೆ. ಡಯಾನಾಳನ್ನ ಕೊಲೆ ಮಾಡಿದ್ದಾಗಿ ಬ್ರಿಟನ್ನಿನ ಗುಪ್ತಚರ ತಂಡ ಎಂಐ5ನ ಮಾಜಿ ಅಧಿಕಾರಿ ಜಾನ್ ಹಾಪ್ಕಿನ್ಸ್ ಹೇಳಿಕೊಂಡಿದ್ದಾನೆಂದು ವರದಿಯಾಗಿದೆ..

ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ 80 ವರ್ಷದ ಜಾನ್ ಹಾಪ್ ಕಿನ್ಸ್ ಬದುಕುವುದು ಕೆಲ ದಿನಗಳು ಮಾತ್ರ. ಈ ಮಧ್ಯೆ ಸ್ಫೋಟದ ಸುದ್ದಿಯನ್ನ ಹೊರಹಾಕಿದ್ದಾನೆ. 1997ರಲ್ಲಿ ಪ್ಯಾರಿಸ್ ಅಪಘಾತದಲ್ಲಿ ಡಯಾನಾ ಸಾವಿಗೀಡಾಗಿದ್ದರು ಎಂದು ನಂಬಲಾಗಿದೆ. ಆದರೆ, ಅದು ಕೊಲೆ. ಅಪಘಾತದ ರೀತಿ ಕೊಲೆ ಮಾಡುವಂತೆ ನಮಗೆ ಆದೇಶ ಬಂದಿತ್ತು. 1973ರಿಂದ 1999ರವರೆಗೆ 23 ಮಂದಿಯನ್ನ ಕೊಲೆ ಮಾಡಿದ್ದೇವೆ. ಇದರಲ್ಲಿ ಇದರಲ್ಲಿ ಏಕೈಕ ಮಹಿಳೆ ಮತ್ತು ಏಕೈಕ ರಾಜವಂಶದವರು ಎಂದು ಹೇಳಿಕೊಂಡಿದ್ದಾನೆ.

ಆದರೆ, ಕೊಲೆಯನ್ನ ಹೇಗೆ ನಡೆಸಲಾಯಿತು, ತಂತ್ರ ರೂಪಿಸಿದ್ದುಹೇಗೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಗಳನ್ನ ಆತ ನೀಡಿಲ್ಲ. ಕೊಲೆ ಬಗ್ಗೆ ಕೆಲವರಿಗೆ ಗೊತ್ತಿದ್ದರೂ ಬಲವಂತವಾಗಿ ಬಾಯಿ ಮುಚ್ಚಿಸಿದ್ದರು ಎಂದು ಹೇಳಿದ್ದಾನೆ. ಈ ಎಲ್ಲ ಹೇಳಿಕೆಗಳಿಗೆ ಹಾಪ್ ಕಿನ್ಸ್ ಸೂಕ್ತ ದಾಖಲೆ ನೀಡಿಲ್ಲವಾದ್ದರಿಂದ  ಇದು ಫೇಕ್ ವಿಶ್ವಾಸಾರ್ಹ ಹೇಳಿಕೆಯಲ್ಲ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ