ಪತಿ ಸಾವಿಗೆ ನ್ಯಾಯ ಸಿಕ್ಕಿದ್ದಕ್ಕೆ ಯೋಗಿಯನ್ನು ಕೊಂಡಾಡಿದ್ದೆ ತಪ್ಪಾಯ್ತು, ಎಸ್‌ಪಿ ಶಾಸಕಿ ಪಕ್ಷದಿಂದಲೇ ಹೊರಕ್ಕೆ

Sampriya

ಗುರುವಾರ, 14 ಆಗಸ್ಟ್ 2025 (19:07 IST)
Photo Credit X
ಅಪರಾಧಿಗಳು ಮತ್ತು ಮಾಫಿಯಾಗಳನ್ನು ನಿರ್ಮೂಲನೆ ಮಾಡಲು ಶೂನ್ಯ ಸಹಿಷ್ಣುತೆ ನೀತಿಯನ್ನು ತಂದಿದ್ದಕ್ಕಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಅವರನ್ನು ಕೊಂಡಾಡಿದ್ದಕ್ಕೆ ಸಮಾಜವಾದಿಪಕ್ಷದ ಶಾಸಕಿ ಪೂಜಾ ಪಾಲ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. 

ಸಮಾಜವಾದಿ ಪಕ್ಷ (ಎಸ್‌ಪಿ) ಗುರುವಾರ ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಅಶಿಸ್ತಿನ ಕಾರಣಕ್ಕಾಗಿ ತನ್ನ ಶಾಸಕಿ ಪೂಜಾ ಪಾಲ್ ಅವರನ್ನು ಉಚ್ಚಾಟಿಸಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಿದ ಅಪರಾಧದ ವಿರುದ್ಧ ಶೂನ್ಯ ಸಹಿಷ್ಣು ನೀತಿಗಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಸಲ್ಲಿಸಿದ ನಂತರ ಈ ಕ್ರಮ ಬಂದಿದೆ.

ರಾಜ್ಯ ವಿಧಾನಸಭೆಯಲ್ಲಿ 24 ಗಂಟೆಗಳ ಕಾಲ ನಡೆದ 'ವಿಷನ್ 2047' ಚರ್ಚೆಯಲ್ಲಿ ಸಮಾಜವಾದಿ ಪಕ್ಷದ ಶಾಸಕ ಪೂಜಾ ಪಾಲ್, 'ಅಪರಾಧದ ವಿರುದ್ಧ ಶೂನ್ಯ ಸಹಿಷ್ಣುತೆ' ನೀತಿಗಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದರು.

ಅತಿಕ್ ಅಹ್ಮದ್‌ನಂತಹ ಕ್ರಿಮಿನಲ್‌ಗಳ ಹತ್ಯೆಗೆ ಕಾರಣವಾದ ಶೂನ್ಯ ಸಹಿಷ್ಣುತೆಯಂತಹ ನೀತಿಗಳನ್ನು ತರುವ ಮೂಲಕ ಯುಪಿ ಸಿಎಂ ತನಗೆ ನ್ಯಾಯ ಒದಗಿಸಿದ್ದಾರೆ ಎಂದು ಎಸ್‌ಪಿ ಶಾಸಕ ಹೇಳಿದ್ದರು.

ಪ್ರಯಾಗರಾಜ್ ಪಶ್ಚಿಮ ಕ್ಷೇತ್ರದ ಬಿಎಸ್‌ಪಿಯ ಮಾಜಿ ಶಾಸಕ ರಾಜು ಪಾಲ್ ಅವರನ್ನು 2005ರ ಜನವರಿಯಲ್ಲಿ ಅವರ ಮದುವೆ ನಡೆದ ಕೆಲವೇ ದಿನಗಳಲ್ಲಿ, ಪಾತಕಿ ಅತೀಕ್ ಅಹ್ಮದ್‌ ಗ್ಯಾಂಗ್ ಗುಂಡಿನ ದಾಳಿಯಲ್ಲಿ ಕೊಂದು ಹಾಕಿತ್ತು

ಅತೀಕ್ ಅಹ್ಮದ್‌ನನ್ನು 2023ರ ಏಪ್ರಿಲ್ 15 ರಂದು ಪ್ರಯಾಗರಾಜ್‌ನಲ್ಲಿ ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಪತ್ರಕರ್ತರಂತೆ ನಟಿಸುತ್ತಿದ್ದ ಮೂವರು ವ್ಯಕ್ತಿಗಳು ಗುಂಡು ಹಾರಿಸಿ ಕೊಂದಿದ್ದರು.

ಪ್ರಕರಣದ ಬಳಿಕ "ತನಗೆ ನ್ಯಾಯವನ್ನು ತಂದುಕೊಟ್ಟ" ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶೂನ್ಯ ಸಹಿಷ್ಣುತೆಯ ನೀತಿಗೆ ಮನ್ನಣೆ ನೀಡಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ವಿಷನ್ ಡಾಕ್ಯುಮೆಂಟ್ 2047 ಕುರಿತು 24 ಗಂಟೆಗಳ ಮ್ಯಾರಥಾನ್ ಚರ್ಚೆಯಲ್ಲಿ ಮಾತನಾಡಿದ ಪೂಜಾ ಪಾಲ್, "ನನ್ನ ಪತಿಯನ್ನು ಕೊಲೆ ಮಾಡಿದವರು ಯಾರು ಎಂಬುದು ಎಲ್ಲರಿಗೂ ತಿಳಿದಿದೆ, ಯಾರೂ ಮಾಡದಿದ್ದಾಗ ಮುಖ್ಯಮಂತ್ರಿ ನನ್ನ ಮಾತು ಕೇಳಿದರು. ಅವರ ಶೂನ್ಯ ಸಹಿಷ್ಣುತೆಯ ನೀತಿಯು ಅತೀಕ್ ಅಹಮದ್‌ನಂತಹ ಕ್ರಿಮಿನಲ್‌ಗಳ ಹತ್ಯೆಗೆ ಕಾರಣವಾಯಿತು. ಇಂದು ಇಡೀ ರಾಜ್ಯ ಅವರನ್ನು ವಿಶ್ವಾಸದಿಂದ ನೋಡುತ್ತಿದೆ" ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ