ಲಾಕ್ ಡೌನ್ ನಲ್ಲಿ ಜನರನ್ನು ನಿಯಂತ್ರಿಸಲು ಭೂತ, ಪಿಶಾಚಿಗಳು ಬಳಕೆ!

ಮಂಗಳವಾರ, 14 ಏಪ್ರಿಲ್ 2020 (09:36 IST)
ನವದೆಹಲಿ: ಇತ್ತೀಚೆಗಷ್ಟೇ ವಿದೇಶದಲ್ಲಿ ಲಾಕ್ ಡೌನ್ ವೇಳೆ ಜನರು ಮನೆಯಿಂದ ಹೊರಬಾರದಂತೆ ನಿಯಂತ್ರಿಸಲು ಪಿಶಾಚಿ ವೇಷ ಧರಿಸಿದ ದ್ರೋಣ್ ಕ್ಯಾಮರಾ ಬಳಕೆ ಮಾಡಿದ ವಿಡಿಯೋ ವೈರಲ್ ಆಗಿತ್ತು.


ರಾತ್ರಿ ವೇಳೆ ಪಿಶಾಚಿ ವೇಷದ ದ್ರೋಣ್ ಕ್ಯಾಮರಾ ರಸ್ತೆ ಬದಿಯಲ್ಲಿದ್ದ ಜನರನ್ನು ಹೆದರಿಸಿ ಮನೆ ಒಳಗೆ ಓಡಿಸುತ್ತಿತ್ತು. ಇದು ಆ ದೇಶದಲ್ಲಿ ಪೊಲೀಸರು ಕಂಡುಕೊಂಡಿದ್ದ ವಿನೂತನ ಐಡಿಯಾ.

ಇದೀಗ ಇಂಡೋನೇಷ್ಯಾದಲ್ಲೂ ಭೂತದ ತಂತ್ರ ಮಾಡಲಾಗಿದೆ. ಮೈ ತುಂಬಾ ಬಿಳಿ ಬಟ್ಟೆ ಹೊದ್ದ ವ್ಯಕ್ತಿಗಳು ರಸ್ತೆಗಳಲ್ಲಿ ಗಸ್ತು ತಿರುಗುತ್ತಿದ್ದು, ಜನರನ್ನು ಮನೆಗೆ ಓಡಿಸುತ್ತಿದ್ದಾರೆ. ಪಕ್ಕಾ ಭೂತ ಬಂದಿದೆಯೆಂದು ಹೆದರಿಯೇ ಜನ ಮನೆಯಿಂದ ಹೊರಗೆ ಬಾರದೇ ಇರುವಂತೆ ಮಾಡುವುದು ಅಲ್ಲಿನ ಸರ್ಕಾರ ಐಡಿಯಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ