ಮೀನು ಇನ್ಮುಂದೆ ತಿನ್ನೋಕೆ ಸಿಗುತ್ತೆ : Don’t worry

ಸೋಮವಾರ, 13 ಏಪ್ರಿಲ್ 2020 (22:46 IST)
ಲಾಕ್ ಡೌನ್ ವಿಸ್ತರಣೆ ನಡುವೆ ಕೆಲವು ಷರತ್ತುಗಳೊಂದಿಗೆ ಮೀನುಗಾರಿಕೆಗೆ ಪರ್ಮಿಷನ್ ಕೊಟ್ಟಿರೋದ್ರಿಂದ ಇನ್ಮುಂದೆ ತಿನ್ನೋಕೆ ಮೀನು ಸಿಗುತ್ತವೆ.

ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಕೆಲ ಷರತ್ತುಗಳನ್ನು ವಿಧಿಸಿ ಮೀನುಗಾರಿಕೆ ಇಲಾಖೆ ಅವಕಾಶ ನೀಡಿದೆ.

ನಾಡದೋಣಿ, ಹತ್ತು ಎಚ್‌ಪಿ ಮೋಟಾರ್ ಅಳವಡಿಸಿದ ದೋಣಿಗಳು ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಮೀನುಗಾರರು ಪ್ರತಿದಿನ ಮುಂಜಾನೆ ಅಥವಾ ಹಿಂದಿನ ರಾತ್ರಿ ಮೀನುಗಾರಿಕೆಗೆ ತೆರಳಿ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಹಿಡಿದು ತಂದ ಮೀನನ್ನು ನಿಗದಿತ ಸ್ಥಳಗಳಲ್ಲಿ ಖಾಲಿ ಮಾಡಬಹುದಾಗಿದೆ.

ಒಂದೊಮ್ಮೆ ಹಿಡಿದ ಮೀನುಗಳನ್ನು ಮೀನುಗಾರರೆ ಮಾರಾಟ ಮಾಡುವುದಾದರೆ ಸಂಬಂಧಿಸಿದ ಪ್ರಾಧಿಕಾರದ ಮೂಲಕ ಅಧಿಕೃತ ಪಾಸ್ ಪಡೆದುಕೊಂಡು, ಮನೆಮನೆಗೆ ತೆರಳಿ ಮಾರಾಟ ಮಾಡಬಹುದು.  ಅಧಿಕೃತ ಪಾಸ್ ಹೊಂದಿದ ಮೀನು ಮಾರಾಟಗಾರರಿಗೆ ಸಹ ಮೀನನ್ನು ಕೊಡಬಹುದಾಗಿದೆ ಎಂದು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ