ನೇಪಾಳದಲ್ಲಿ ದಲಾಯಿ ಲಾಮಾರ ಜನ್ಮದಿನಾಚರಣೆಯನ್ನು ಆಚರಣೆ ಮಾಡಲು ನಿರಾಕರಿಸಿದ ಸರ್ಕಾರ!

ಸೋಮವಾರ, 8 ಜುಲೈ 2019 (09:31 IST)
ಕಠ್ಮಂಡು : ನೇಪಾಳದಲ್ಲಿ ಧಾರ್ಮಿಕ ಮುಖಂಡ ದಲಾಯಿ ಲಾಮಾ ಅವರ ಜನ್ಮದಿನಾಚರಣೆಯನ್ನು ಆಚರಣೆ ಮಾಡುವುದನ್ನು ಅಲ್ಲಿನ ಸರ್ಕಾರ ನಿರಾಕರಿಸಿದೆ.




ಶನಿವಾರ 84ನೇ ವರ್ಷಕ್ಕೆ ಕಾಲಿರಿಸಿದ ದಲಾಯಿ ಲಾಮಾರ ಜನ್ಮದಿನವನ್ನು ಕಠ್ಮಂಡುವಿನಲ್ಲಿ ಸಂಭ್ರಮದಿಂದ ಆಚರಿಸಲು ನೇಪಾಳದಲ್ಲಿರುವ ಟಿಬೆಟಿಯನ್ ಸಮುದಾಯದವರು ಸರ್ಕಾರದ ಬಳಿ ಅನುಮತಿ ನೀಡುವಂತೆ ಮನವಿ ಮಾಡಿತ್ತು. ಆದರೆ ಭದ್ರತಾ ಕಾರಣಗಳಿಗಾಗಿ ಸರ್ಕಾರ ನಿರಾಕರಿಸಿದೆ ಎಂಬುದಾಗಿ ತಿಳಿದುಬಂದಿದೆ.


ಒಳನುಸುಳುವವರಿಂದ ಕಾನೂನು ಮತ್ತು ಶಿಸ್ತು ಪಾಲನೆಗೆ ಸಮಸ್ಯೆಯಾಗುವ ಸಂಭವವಿದೆ. ಅಲ್ಲದೆ ಒಳನುಸುಳುಕಾರರು ಕಠ್ಮಂಡುವಿನಲ್ಲಿ ಪ್ರತಿಭಟನಾ ಜಾಥಾ ನಡೆಸಿ ಆತ್ಮಾಹುತಿಗೆ ಮುಂದಾಗುವ ಸಾಧ್ಯತೆಯಿದೆ. ಆದ್ದರಿಂದ ಹುಟ್ಟು ಹಬ್ಬ ಆಚರಣೆಗೆ ಅನುಮತಿ ನಿರಾಕರಿಸಿರುವುದಾಗಿ ಕಠ್ಮಂಡುವಿನ ಸಹಾಯಕ ಜಿಲ್ಲಾಧಿಕಾರಿ ಕೃಷ್ಣಬಹಾದುರ್ ಕಟುವಾಲ್ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ