ಎಲ್ಲರೆದುರೇ ಪಾಕಿಸ್ತಾನ ಪ್ರಧಾನಿ ಷರೀಫ್ ಮಾನ ಕಳೆದ ಭಾರತೀಯ ಪತ್ರಕರ್ತೆ: ವಿಡಿಯೋ ಈಗ ಭಾರೀ ವೈರಲ್
ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗಿಯಾಗಲು ಅಧಿಕಾರಿಗಳೊಂದಿಗೆ ತೆರಳುತ್ತಿದ್ದ ಪಾಕಿಸ್ತಾನ ಪ್ರಧಾನಿ ಬಾಗಿಲು ದಾಟಿ ಬರುತ್ತಿದ್ದಂತೇ ಭಾರತದ ಪತ್ರಕರ್ತೆ ಆಯುಷಿ ಮೈಕ್ ಹಿಡಿದು ಸ್ವಲ್ಪ ದೂರದಿಂದಲೇ ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುವುದನ್ನು ಯಾವಾಗ ನಿಲ್ಲಿಸ್ತೀರಿ ಮಿಸ್ಟರ್ ಪ್ರೈಮ್ ಮಿನಿಸ್ಟರ್ ಎಂದು ಧೈರ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ಮೊದಲು ಆಕೆಯ ಮಾತಿಗೆ ಕಿವಿಗೊಡದೇ ಮುನ್ನಡೆದ ಶಹಬಾಜ್ ಷರೀಫ್ ನಂತರ ಹಿಂತಿರುಗಿ, ನಾವು ಭಯೋತ್ಪಾದನೆಯನ್ನು ದಮನಿಸುತ್ತಿದ್ದೇವೆ, ನಾವು ಅವರನ್ನು ಸೋಲಿಸಲಿದ್ದೇವೆ ಎಂದು ಪ್ರತ್ಯುತ್ತರ ನೀಡಿ ಮುನ್ನಡೆದರು. ಆದರೆ ಅವರು ಮುನ್ನಡೆಯುತ್ತಿರುವಾಗ ಆಯುಷಿ ಭಾರತ ನಿಮ್ಮನ್ನು ಸೋಲಿಸುತ್ತದೆ ಮಿಸ್ಟರ್ ಪಾಕಿಸ್ತಾನ್ ಪ್ರೈಮ್ ಮಿನಿಸ್ಟರ್ ಎಂದು ಕೂಗಿ ಹೇಳಿದ್ದಾರೆ. ಅವರ ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ಭಾರತೀಯ ಪತ್ರಕರ್ತೆಯ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.