ವಿಪರೀತ ಚಳಿಗೆ ಗುಜರಾತ್ ಮೂಲದ ಮಂದಿ ಸಾವು!

ಸೋಮವಾರ, 24 ಜನವರಿ 2022 (09:49 IST)
ವಾಷಿಂಗ್ಟನ್ : ಕೆನಡಾ ಗಡಿಯಿಂದ ಅಮೆರಿಕಕ್ಕೆ ನುಸುಳಲು ಯತ್ನಿಸುವ ವೇಳೆ ಮೈನಸ್ 35 ಡಿಗ್ರಿ ಸೆ. ಚಳಿಯನ್ನು ತಾಳಲಾರದೇ ಗುಜರಾತ್ ಮೂಲದ ಕುಟುಂಬವೊಂದು ಸಾವನ್ನಪ್ಪಿದೆ.
ದುರ್ಘಟನೆಯಲ್ಲಿ ಒಂದು ಮಗು, ಇಬ್ಬರು ವಯಸ್ಕರು ಮತ್ತು ಒಬ್ಬರು ಹದಿಹರೆಯದವರು ಮೃತಪಟ್ಟಿದ್ದಾರೆ. ಈ ಕುಟುಂಬ ಮೂಲತಃ ಗುಜರಾತ್ನ ಗಾಂಧಿನಗರ ಜಿಲ್ಲೆಯ ಕಲೋಲ್ ತೆಹ್ಸಿಲ್ನ ಹಳ್ಳಿಯವರಾಗಿದ್ದಾರೆ.

ಇವರ ಶವಗಳು ಕೆನಡಾ ಗಡಿಯಿಂದ ಕೆಲವೇ ಮೀಟರ್ಗಳ ಅಂತರದಲ್ಲಿ ಅಮೆರಿಕದಲ್ಲಿ ಪತ್ತೆಯಾಗಿತ್ತು. ಅಮೆರಿಕ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಗುಂಪಿನಿಂದ ಈ ಕುಟುಂಬ ಬೇರ್ಪಟ್ಟ ಕಾರಣ ದಾರಿಕಾಣದೇ ಚಳಿಗೆ ಸಿಲುಕಿ ಸತ್ತಿರಬಹುದೆಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಈ ಗುಂಪಿನಲ್ಲಿದ್ದ ಇನ್ನೂ ಏಳು ಜನರನ್ನು ಯುಎಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಗ್ರಾಮದ ನಿವಾಸಿಯೊಬ್ಬರು ಈ ಬಗ್ಗೆ ಮಾತನಾಡಿ, ನಾಲ್ವರ ಕುಟುಂಬವಿದ್ದ ಗ್ರಾಮದ ನಿವಾಸಿಗಳ ಜೊತೆಗೆ ಇನ್ನೂ ಮೂರು-ನಾಲ್ಕು ಕುಟುಂಬಗಳು ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ನಾವು ಅವರ ಫೋಟೋವನ್ನು ಹಾಗೂ ವಿವರಗಳನ್ನು ವಿದೇಶಾಂಗ ಸಚಿವಾಲಯಕ್ಕೆ ಮೇಲ್ ಮಾಡಿದ್ದೇವೆ ಎಂದು ತಿಳಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ