ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಹೆರಂಜೆ ಕ್ರಾಸ್ ಬಳಿಯ ತಮ್ಮ ನಿವಾಸದಲ್ಲಿ ಆಗಸ್ಟ್ 31 ರಂದು ಮಹಿಳೆ ಮತ್ತು ಆಕೆಯ ಪುಟ್ಟ ಮಗು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಸುಶ್ಮಿತಾ (35) ಮತ್ತು ಅವರ ಮಗಳು ಶ್ರೇಷ್ಠಾ (1 ವರ್ಷ 6 ತಿಂಗಳು) ಎಂದು ಗುರುತಿಸಲಾಗಿದೆ.
ಸುಶ್ಮಿತಾ ಅವರ ಪತಿ ನ್ಯಾಯಾಲಯದ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಬ್ರಹ್ಮಾವರದಲ್ಲಿ ಸೆ.1ರಂದು ಮಧ್ಯಾಹ್ನ ಮಹಿಳೆ ಹಾಗೂ ಮಗು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತರನ್ನು ಸುಶ್ಮಿತಾ ಹಾಗೂ ಅವರ ಒಂದೂವರೆ ವರ್ಷದ ಮಗಳು ಎಂದು ಗುರುತಿಸಲಾಗಿದೆ.
ಮಗಳನ್ನು ಕೊಂದ ಬಳಿಕ ತಾಯಿ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. 2009 ರ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಅವರ ಪತಿಯನ್ನು ಹೈಕೋರ್ಟ್ ಅಪರಾಧಿ ಎಂದು ಘೋಷಿಸಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.