ಜಿಹಾದ್‌ನಿಂದಲೇ ಜಮ್ಮು ಕಾಶ್ಮಿರಕ್ಕೆ ಸ್ವಾತಂತ್ರ್ಯ, ಮಾತುಕತೆಯಿಂದಲ್ಲ: ಹಫೀಜ್ ಸಯೀದ್

ಶುಕ್ರವಾರ, 16 ಡಿಸೆಂಬರ್ 2016 (17:39 IST)
ಜಮ್ಮು ಕಾಶ್ಮಿರ ವಿವಾದ ಮಾತುಕತೆಯಿಂದ ಸಾಧ್ಯವಿಲ್ಲ. ಜಿಹಾದ್‌ ಘೋಷಣೆಯೇ ಅದಕ್ಕೆ ಸೂಕ್ತ ಉತ್ತರವಾಗಿದೆ ಎಂದು ಜಾಗತಿಕ ಉಗ್ರಗಾಮಿ ಲಷ್ಕರ್-ಎ-ತೊಯಿಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಘೋಷಿಸಿದ್ದಾನೆ.
 
ಲಷ್ಕರ್-ಎ-ತೊಯಿಬಾ ಮತ್ತು ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್, ಪಾಕಿಸ್ತಾನ ಆಕ್ರಮಿತ ಕಾಶ್ಮಿರದಲ್ಲಿ ಯುನೈಟೆಡ್ ಜಿಹಾದಿ ಕೌನ್ಸಿಲ್ ಕಮಾಂಡರ್‌ಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ ಭಾರತದ ವಿರುದ್ಧ ದಾಳಿ ಮುಂದುವರಿಸುವಂತೆ ಕರೆ ನೀಡಿದರು.
 
ಭಾರತದಲ್ಲಿ ಹಲವಾರು ದಾಳಿಗಳ ಹಿಂದಿನ ರೂವಾರಿಯಾದ ಹಫೀಜ್, ಕಾಶ್ಮಿರ ಸ್ವಾತಂತ್ರ್ಯಗೊಳಿಸಲು ಮಾತುಕತೆಯಿಂದ ಸಾಧ್ಯವಿಲ್ಲ. ಅದಕ್ಕೆ ಜಿಹಾದ್ ಸಾರಬೇಕಾಗಿದೆ. ಪಾಕ್ ಪ್ರಧಾನಿಯ ಸಲಹೆಗಾರ ಸರ್ತಾಜ್ ಅಜೀಜ್ ಅವರಿಗೆ ಭಾರತ ಮಾಡಿದ ಅಪಮಾನ ಸಂಪೂರ್ಣ ಪಾಕಿಸ್ತಾನಕ್ಕೆ ಮಾಡಿದ ಅಪಮಾನವಾಗಿದೆ ಎಂದು ಕೆಂಡಕಾರಿದ್ದಾನೆ. 
 
ಜಮ್ಮುವಿನ ಭೌಗೋಳಿಕ ಚಿತ್ರಣವನ್ನು ಬದಲಿಸಿ ಪಾಕಿಸ್ತಾನಕ್ಕೆ ಹರಿಯುವ ನದಿಯ ನೀರನ್ನು ನಿಲ್ಲಿಸಿ ಮೋದಿ, ರಷ್ಯಾದ ಮಿಚೈಲ್ ಗೋರ್ಬೋಚೇವ್ ಅವರಂತೆ ವರ್ತಿಸುತ್ತಿದ್ದಾರೆ ಎಂದು ಪಾಕ್ ಉಗ್ರ ಹಫೀಜ್ ಸಯೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ