ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರವಾಗಿಸುವುದೇ ನಮ್ಮ ಗುರಿ: ಹಫೀಜ್
ಸೋಮವಾರ, 21 ಆಗಸ್ಟ್ 2017 (19:36 IST)
ಪಾಕಿಸ್ತಾನದಲ್ಲಿ ಇಸ್ಲಾಮಿಕ್ ರಾಷ್ಟ್ರ ರಚನೆಗೆ ಯೋಜನೆಗಳನ್ನು ಘೋಷಿಸಲಾಗಿದ್ದು, ಹಫೀಜ್ ಸಯೀದ್ ಮುಖ್ಯ ಪಾತ್ರವಹಿಸಲಿದ್ದಾರೆ ಎಂದು ಮಿಲ್ಲಿ ಮುಸ್ಲಿಂ ಲೀಗ್ ಅಧ್ಯಕ್ಷ ಸೈಫುಲ್ಲಾ ಖಾಲೀದ್ ಹೇಳಿದ್ದಾರೆ.
ದೇಶವನ್ನು ಜಾತ್ಯತೀತತೆ ಮತ್ತು ಉದಾರವಾದದ ದಾರಿಯಲ್ಲಿ ಇರಿಸಲಾಗಿದೆ. ಪಾಕಿಸ್ತಾನದ ಸಿದ್ಧಾಂತದ ಬದಲಾವಣೆಗಳಿಗೆ ನಮ್ಮ ವೇದಿಕೆ ಸಿದ್ದವಾಗಿದೆ ಎಂದು ಘೋಷಿಸುತ್ತೇವೆ, ಪಾಕಿಸ್ತಾನವನ್ನು ನಿಜವಾದ ಇಸ್ಲಾಮಿಕ್ ರಾಷ್ಟ್ರವಾಗಿಸಲು ಯೋಜನೆ ರೂಪಿಸುತ್ತೇವೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿರುವ ಉದಾರವಾದಿಗಳ ವಿರುದ್ಧ ಯುದ್ಧ ಘೋಷಿಸಿರುವ ಎಂಎಂಎಲ್ ನಾಯಕರು, ದೇಶದ 70 ನೇ ಸ್ವಾತಂತ್ರ್ಯ ದಿನದಂದು ಪ್ರಮುಖ ನಗರಗಳಲ್ಲಿ ವಿವಿಧ ಸಾರ್ವಜನಿಕ ರ್ಯಾಲಿಗಳನ್ನು ಏರ್ಪಡಿಸಿದರು.
ಅಮೆರಿಕ ಹಫೀಜ್ ಸಯೀದ್‌ರನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದರೂ ಪಕ್ಷದಲ್ಲಿ ಉನ್ನತ ಹುದ್ದೆ ಹೊಂದಲು ಅಡ್ಡಿಯಾಗುವುದಿಲ್ಲ. ಪಾಕಿಸ್ತಾನದ ರಾಜಕೀಯದಲ್ಲಿ ಹಫೀಜ್ ಸಯೀದ್ ಮಹತ್ತರ ಪಾತ್ರವಹಿಸುತ್ತಾರೆ ಎಂದು ಮಿಲ್ಲಿ ಮುಸ್ಲಿಂ ಲೀಗ್ ಅಧ್ಯಕ್ಷ ಸೈಫುಲ್ಲಾ ಖಾಲೀದ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.