ಡೊನಾಲ್ಡ್ ಟ್ರಂಪ್ ಬಂಧನದ ಬಗ್ಗೆ ಭಾರೀ ಚರ್ಚೆ?

ಶುಕ್ರವಾರ, 31 ಮಾರ್ಚ್ 2023 (11:57 IST)
ಇದೀಗ ಟ್ರಂಪ್ ಮುಂಬರುವ ಮಂಗಳವಾರ ಶರಣಾಗುವ ಸಾಧ್ಯತೆಯಿದೆ. ಆದರೆ ಅವರ ಬಂಧನ ಬಗೆಗಿನ ಚರ್ಚೆಯೇ ಹೆಚ್ಚು ಸದ್ದು ಮಾಡುತ್ತಿದೆ. ಏಕೆಂದರೆ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಇವರಾಗಿದ್ದಾರೆ.
 
ಅಪರಾಧ ಪ್ರಕರಣಗಳ ಬಂಧನ ಪ್ರಕ್ರಿಯೆಯೇ ಟ್ರಂಪ್ ಅವರಿಗೂ ಅನ್ವಯಿಸಲಿದೆಯೇ ಎಂಬುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಂದುವೇಳೆ ಟ್ರಂಪ್ ಬಂಧನವಾದರೆ ಪೊಲೀಸರು ಅವರಿಗೆ ಮೊದಲು ಕೈಕೊಳ ತೊಡಿಸಲಿದ್ದಾರೆ. ನಂತರ ಅವರ ಬೆರಳಚ್ಚು ಪಡೆದು ಸಾಮಾನ್ಯ ಅಪರಾಧಿಯಂತೆಯೇ ಛಾಯಾಚಿತ್ರವನ್ನೂ ತೆಗೆಯಲಿದ್ದಾರೆ.

ಅಪರಾಧ ಆರೋಪದ ಮೇಲೆ ಬಂಧಿತರಾಗುವವರಿಗೆ ಕೈಕೊಳ ಹಾಕುವುದು ಮಾನದಂಡ. ಮಾಜಿ ಅಧ್ಯಕ್ಷರಿಗೆ ಇದರ ವಿನಾಯಿತಿ ನೀಡಲಾಗುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ