ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಸಿದ್ಧ ಪ್ರವಾಸಿ ತಾಣ ಮರ್ರೆಯಲ್ಲಿ ಭಾರೀ ಹಿಮಪಾತದಿಂದಾಗಿ, ಪ್ರವಾಸಿಗರು ಹಿಮಾವೃತವಾದ ತಮ್ಮ ವಾಹನಗಳಲ್ಲೇ ಸಿಲುಕಿದ್ದಾರೆ.
ನಿನ್ನೆಯಿಂದ ಒಟ್ಟು 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾವಿರಾರು ಪ್ರವಾಸಿಗರು ರಾವಲ್ಪಿಂಡಿ ಜಿಲ್ಲೆಯ ಮರ್ರೆಗೆ ತೆರಳಿದ್ದು, ತಮ್ಮ ವಾಹನಗಳನ್ನು ಹಿಮದ ರಾಶಿಯಿಂದ ತೆಗೆಯಲಾಗದೇ ಸಿಲುಕಿಕೊಂಡಿದ್ದಾರೆ. ಸದ್ಯ ಪಾಕಿಸ್ತಾನ ಸರ್ಕಾರ ಮರ್ರೆ ಪ್ರವಾಸವನ್ನು ನಿರ್ಬಂಧಿಸಿದೆ.
ಇದೀಗ ಮರ್ರೆಯಲ್ಲಿ ಸಿಲುಕಿದ್ದ 1,122 ಜನರನ್ನು ರಕ್ಷಿಸಲಾಗಿದೆ. 22 ಮಂದಿ ಮೃತರಲ್ಲಿ 10 ಮಕ್ಕಳೂ ಸೇರಿದ್ದಾರೆ ಎಂದು ಮಾಹಿತಿ ದೊರಕಿದೆ. ರಸ್ತೆಗಳನ್ನು ತೆರವುಗೊಳಿಸಲು ಮತ್ತು ಸಿಲುಕಿರುವ ಜನರನ್ನು ರಕ್ಷಿಸಲು ಮಿಲಿಟರಿಯನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.