ನೂರು ವರ್ಷಗಳಿಂದ ಬಂಧನದಲ್ಲಿದೆ ಈ ಮರ

ಮಂಗಳವಾರ, 28 ಫೆಬ್ರವರಿ 2017 (12:24 IST)
ಮನುಷ್ಯರನ್ನು, ಪ್ರಾಣಿಗಳನ್ನು ಬಂಧಿಸಿಟ್ಟಿರುವುದನ್ನು ನೋಡಿರುತ್ತೀರ. ಆದರೆ ಮರವನ್ನು ಸರಳುಗಳಿಂದ ಬಂಧಿಸಿರುವುದನ್ನುಪ ಎಂದಾದರು ನೋಡಿರುತ್ತೀರಾ? ಆದರೆ ಪಾಕಿಸ್ತಾನದಲ್ಲೊಂದು ಆಲದ ಮರವನ್ನು 118 ವರ್ಷಗಳಿಂದ ಬಂಧಿಸಿಡಲಾಗಿದ್ದು ಅದರ ಮುಂದೆ "ಐ ಆ್ಯಮ್ ಅಂಡರ್ ಅರೆಸ್ಟ್ " ಎಂಬ ಬೋರ್ಡ್‌ನ್ನು ನೇತು ಹಾಕಲಾಗಿದೆ. ಅದ್ಯಾಕೆ ಹೀಗೆ ಎನ್ನುತ್ತಿರಾ? ತನ್ನ ಸುತ್ತಲಿರುವವರಿಗೆ ಸದಾ ಒಳಿತನ್ನೇ ಮಾಡುವ ಮರವನ್ನು ಬಂಧಿಸಿದ್ದು ಯಾಕೆ.. ಎಂಬುದನ್ನು ನೀವೇ ಓದಿ.


ಮತ್ತಿನಲ್ಲಿ ಬ್ರಿಟಿಷ್ ಸೇನಾಧಿಕಾರಿಯ ಮಾಡಿದ ಯಡವಟ್ಟು ಇದು. ಅದು 1898ನೇ ವರ್ಷ. ಅಖಂಡ ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲ. ಒಂದು ರಾತ್ರಿ ಸೇನಾಧಿಕಾರಿಯೊಬ್ಬ ಕಂಠಪೂರ್ತಿ ಕುಡಿದು ಹೋಗುತ್ತಿದ್ದ. ದಾರಿ ಮಧ್ಯೆದಲ್ಲಿ ಈ ಆಲದ ಮರವನ್ನು ದಾಟುತ್ತಿದ್ದ. ಅಮಲಿನಲ್ಲಿದ್ದ ಆತನಿಗೆ ಆಲದಮರ ತನ್ನನ್ನು ಹಿಂಬಾಲಿಸುತ್ತಿದೆ ಎಂದನ್ನಿಸತೊಡಗಿತು. ಹೀಗಾಗಿ ತಕ್ಷಣ ಆ ಆಲದ ಮರವನ್ನು ಬಂಧಿಸುವಂತೆ ಆದೇಶಿಸಿದ. ಅದರಂತೆ ಆ ಮರವನ್ನು ಸರಳುಗಳಿಂದ ಬಂಧಿಸಲಾಯಿತು.
 
118 ವರ್ಷಗಳಿಂದ ಈ ಆಲದ ಬಂಧಿತ ಸ್ಥಿತಿಯಲ್ಲಿಯೇ ಇದೆ. ಅದನ್ನು ಬಿಡಿಸುವ ಕೆಲಸವನ್ನು ಸಹ ಯಾರೂ ಮಾಡಿಲ್ಲ. ಪಾಕ್ ಸೇನಾ ಕಂಟೋನ್ಮೆಂಟ್‌ಲ್ಲಿ ಇಂದಿಗೂ ಆ ಮರ ಬಂಧನದ ಸ್ಥಿತಿಯಲ್ಲಿಯೇ ಇದೆ.

ವೆಬ್ದುನಿಯಾವನ್ನು ಓದಿ