ಚಾಂಗ್ ಚಿನ್ ಯಿ ಎಂಬಾಕೆ ಬೆಕ್ಕು ಸಾಕಣೆ ಮಾಡುತ್ತಿದ್ದು, ಈಕೆಯ ಬಳಿ 40 ಪರ್ಷಿಯನ್ ಬೆಕ್ಕುಗಳಿದ್ದು, ಪ್ರತಿಯೊಂದೂ 3,300 ಡಾಲರ್ ಬೆಲೆ ಬಾಳುತ್ತವೆ. ಆದರೆ ಯುವತಿಯೊಬ್ಬಳು ಬೆಕ್ಕಿನ ಮರಿಗಳ ಖರೀದಿಗೆಂದು ಈಕೆಯ ಮನೆಗೆ ಬಂದಿದ್ದು, ಇದ್ದಕ್ಕಿದ್ದಂತೆ 2 ಪರ್ಷಿಯನ್ ಬೆಕ್ಕುಗಳನ್ನು ಕದ್ದು ನಾಪತ್ತೆಯಾಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಚಾಂಗ್ ಪೊಲೀಸರಿಗೆ ದೂರು ನೀಡಿದ್ದಳು.
ಅಲ್ಲದೇ ಏರ್‍ಪೋರ್ಟ್‍ನಲ್ಲಿ ತಾನು ಸಿಕ್ಕಿ ಹಾಕಿಕೊಳ್ಳಬಾರದೆಂದು ಶೌಚಾಲಯಕ್ಕೆ ಕೈಚೀಲದೊಂದಿಗೆ ಹೋಗಿ ಬೆಕ್ಕಿನ ಮರಿಗಳನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಗರ್ಭಿಣಿಯಂತೆ ಉಬ್ಬಿದ ಹೊಟ್ಟೆಯೊಂದಿಗೆ ಹೊರಬಂದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಪೊಲೀಸರು ಈ ಆಧಾರದ ಮೇಲೆ ಆಕೆಯ ಪತ್ತೆಗೆ ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.