Republic of Balochistan: ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರದಿಂದ ಭಾರತಕ್ಕೆ ಏನು ಲಾಭ

Krishnaveni K

ಗುರುವಾರ, 15 ಮೇ 2025 (09:33 IST)
Photo Credit: X
ನವದೆಹಲಿ: ಭಾರತದ ಮೇಲೆ ದಾಳಿ ಮಾಡಿದ ಪಾಕಿಸ್ತಾನಕ್ಕೆ ಈಗ ಬಲೂಚಿಸ್ತಾನ ನುಂಗಲಾರದ ತುತ್ತಾಗಿದೆ. ಬಲೂಚ್ ಹೋರಾಟಗಾರರು ಈಗ ತಮ್ಮದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿದ್ದಾರೆ. ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರವಾದರೆ ಭಾರತಕ್ಕೆ ಏನು ಲಾಭ ತಿಳಿಯಿರಿ.

ಮೊದಲಿನಿಂದಲೂ ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟಗಾರರು ಹೋರಾಟ ನಡೆಸುತ್ತಲೇ ಇದ್ದರು. ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಬಲೂಚಿಸ್ತಾನಕ್ಕೆ ಲಾಭವಾಗಿದ್ದು ಪಾಕ್ ಸೇನೆ ವಿರುದ್ಧ ದಾಳಿ ನಡೆಸಿ ತಮ್ಮದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿಕೊಂಡಿದ್ದಾರೆ.

 
ಈ ಹಿಂದೆ 1971 ರಲ್ಲಿ ಭಾರತ-ಪಾಕಿಸ್ತಾನ ಯುದ್ಧವಾಗಿ ಬಾಂಗ್ಲಾದೇಶವೆಂಬ ಹೊಸ ರಾಷ್ಟ್ರ ಉದಯವಾಗಿತ್ತು. ಇದೀಗ ಭಾರತ ಮತ್ತು ಪಾಕಿಸ್ತಾನ ಸಂಘರ್ಷದಿಂದ ಪಾಕಿಸ್ತಾನ ಮತ್ತೆ ಇಬ್ಭಾಗವಾಗಿ ಬಲೂಚಿಸ್ತಾನ್ ಎಂಬ ರಾಷ್ಟ್ರ ಉದಯಿಸಿದಂತಾಗಿದೆ.

ಆದರೆ ಇದಕ್ಕೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಒಂದು ವೇಳೆ ಮಾನ್ಯತೆ ಸಿಕ್ಕಿ ಬಲೂಚಿಸ್ತಾನ ಅಧಿಕೃತವಾಗಿ ಹೊಸ ರಾಷ್ಟ್ರವಾದರೆ ಭಾರತಕ್ಕೆ ಲಾಭವಾಗಲಿದೆ. ಬಲೂಚಿಸ್ತಾನಿಯರು ಭಾರತದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಇದು ಪಾಕಿಸ್ತಾನಕ್ಕೆ ಕಂಟಕವೇ. ಯಾಕೆಂದರೆ ಬಲೂಚಿಸ್ತಾನ ಮತ್ತು ಭಾರತದ ಮಧ್ಯೆ ಪಾಕಿಸ್ತಾನವಿದೆ. ಹೀಗಾಗಿ ಪಾಕ್ ಗೆ ಬಾಲಬಿಚ್ಚಿದ್ದರೆ ಒಂದು ಕಡೆಯಿಂದ ಭಾರತ ಇನ್ನೊಂದು ಕಡೆಯಿಂದ ಬಲೂಚಿಸ್ತಾನದ ದಾಳಿ ಎದುರಿಸಬೇಕಾಗುತ್ತದೆ. ಅತ್ತ ಪಾಕಿಸ್ತಾನವೇನಾದರೂ ದಾಳಿ ಮಾಡಿದರೂ ಭಾರತ ಮತ್ತು ಬಲೂಚಿಸ್ತಾನ ಪರಿಸ್ಪರ ಸಹಕಾರ ನೀಡಬಹುದು. ಆಗ ಪಾಕಿಸ್ತಾನ ಇಕ್ಕಟ್ಟಿಗೆ ಸಿಲುಕಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ