ಭಾರತದಲ್ಲಿ ಟಿಕ್ ಟಾಕ್ ನಿಷೇಧದಿಂದ ಚೀನಾ ಕಂಪನಿಗಾಗುವ ನಷ್ಟವೆಷ್ಟು ಗೊತ್ತಾ?

ಬುಧವಾರ, 1 ಜುಲೈ 2020 (08:56 IST)
ನವದೆಹಲಿ: ಚೀನಾ ವಿರುದ್ಧ ಪರೋಕ್ಷ ಸಮರ ಸಾರಿರುವ ಭಾರತ ಭದ್ರತೆ ನೆಪದಲ್ಲಿ 59 ಆಪ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅದರಲ್ಲೂ ಟಿಕ್ ಟಾಕ್ ಎಲ್ಲಕ್ಕಿಂತ ಹೆಚ್ಚು ಬಳಕೆಯಾಗುತ್ತಿದ್ದ ಆಪ್ ಆಗಿತ್ತು.


ಅದೆಷ್ಟೋ ಮಂದಿ ತಮ್ಮ ನಟನೆ, ನೃತ್ಯದ ಕೌಶಲ್ಯ ಪ್ರದರ್ಶಿಸಲು ಟಿಕ್ ಟಾಕ್ ನ್ನು ವೇದಿಕೆಯಾಗಿ ಬಳಸುತ್ತಿದ್ದರು. ಇದರಿಂದಾಗಿ ನಗರದಿಂದ ಗ್ರಾಮೀಣ ಭಾಗದವರೆಗೂ ಟಿಕ್ ಟಾಕ್ ಜನಪ್ರಿಯವಾಗಿತ್ತು. ಅಮೆರಿಕಾ ಬಿಟ್ಟರೆ ಭಾರತದಲ್ಲೇ ಅತೀ ಹೆಚ್ಚು ಬಳಕೆದಾರರಿದ್ದರು.

ಆದರೆ ಈಗ ಟಿಕ್ ಟಾಕ್ ನಿಷೇಧಿಸಿರುವುದರಿಂದ ಪ್ರತಿನಿತ್ಯ ಕಂಪನಿಗೆ ಅಂದಾಜು 3 ರಿಂದ 4 ಕೋಟಿ ನಷ್ಟವಾಗಲಿದೆ ಎನ್ನಲಾಗಿದೆ. ಇದಲ್ಲದೆ, ಭಾರತದಲ್ಲೂ ಟಿಕ್ ಟಾಕ್ ಕಂಪನಿಯ ಶಾಖೆಗಳಿದ್ದು ಅವರೆಲ್ಲಾ ಈಗ ಉದ್ಯೋಗ ಕಳೆದುಕೊಳ್ಳಲಿದ್ದಾರೆ.  ಆದರೆ ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ನಿಂತಿರುವ ಚೀನಾಕ್ಕೆ ಪಾಠ ಕಲಿಸಲು ನಾವು ಇಂತಹ ತ್ಯಾಗ ಮಾಡಲೇಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ