ಬೀಜಿಂಗ್, ಸೆ.13 : ತೈವಾನ್ ಮೇಲೆ ದಾಳಿ ನಡೆಸಿ ಭಾರಿ ಪ್ರಮಾಣದ ನಷ್ಟ ಉಂಟು ಮಾಡಿರುವ ಚಂತುಚಂಡಮಾರುತ ಇದೀಗ ಚೀನಾದ ನಿದ್ದೆಗೆಡಿಸಿದೆ. ಚೀನಾದ ಅತಿ ದೊಡ್ಡ ನಗರವಾಗಿರುವ ಶಾಂಘೈ ಮೇಲೆ ಚಂತು ಚಂಡಮಾರುತ ದಾಳಿ ನಡೆಸಿರುವುದರಿಂದ ಎಲ್ಲಾ ರೀತಿಯ ವಿಮಾನ ಮತ್ತು ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ.
ತೈವಾನ್ನಿಂದ ಶರವೇಗದಲ್ಲಿ ಶಾಂಘೈನತ್ತ ಚಂತು ಚಂಡಮಾರುತ ದಾಂಗುಡಿ ಇಡುತ್ತಿರುವುದರಿಂದ ಶಾಂಘೈ ನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಶಾಂಘೈ ನಂತರ ಚಂಡಮಾರುತ ದಕ್ಷಿಣ ಕೋರಿಯಾ ಹಾಗೂ ಜಪಾನ್ ಮೇಲೂ ದಾಳಿ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಶಾಂಘೈನದ್ಯಾಂತ ಭಾರಿ ಮಳೆಯಾಗುತ್ತಿರುವುದರಿಂದ ಕರಾವಳಿ ತೀರದ ಜಿಲ್ಲೆಯಾದ ಫೆಂಗ್ಸಿಯಾನ್ ಜಿಲ್ಲೆಯ ಲಕ್ಷಾಂತರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.