ಪತಿ, ಪತ್ನಿ ಜಗಳ: ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ

ಬುಧವಾರ, 29 ನವೆಂಬರ್ 2023 (11:12 IST)
ಪತಿ ಪತ್ನಿ ಜಗಳ ಉಡು ಮಲಗುವತನಕ ಎಂದು ಕೇಳಿದ್ದೇವೆ. ಆದರೆ, ಇಂದು ನಡೆದ ಘಟನೆಯೊಂದರಲ್ಲಿ ಪರಸ್ಪರ ವಾಗ್ವಾದದಿಂದಾಗಿ ಪತಿಯೇ ಪತ್ನಿಯನ್ನು ಗುಂಡಿಕ್ಕಿ ಕೊಂದ ದಾರುಣ ಘಟನೆ ವರದಿಯಾಗಿದೆ. 
 
ಕಾನೂನು ರಕ್ಷಿಸಬೇಕಾದ ಪೋಲೀಸ್​ ಅಧಿಕಾರಿಯೊಬ್ಬ ತನ್ನ ಪತ್ನಿಯನ್ನು ನಡು ರಸ್ತೆಯಲ್ಲೇ ಅಟ್ಟಿಸಿಕೊಂಡು ಹೋಗಿ 11 ಬಾರಿ ಗುಂಡು ಹಾರಿಸಿ ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ.  
 
46 ವರ್ಷ ವ್ಯಕ್ತಿ ತನ್ನ ಪತ್ನಿ ವೆರಿಡಿಯಾನಾ ರೋಡ್ರಿಗ್ಸ್ ಕಾರ್ನೈರೋ‌ನನ್ನು ನೆದರ್‌ಲ್ಯಾಂಡ್ ಉಬರ್‌ಲಾಂಡಿಯಾದ ನಡುರಸ್ತೆಯಲ್ಲೇ ಪಿಸ್ತೂಲಿನಿಂದ ಗುಂಡು ಹಾರಿಸಿದಾಗ ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಪತ್ನಿ ಅಸುನೀಗಿದ್ದಾರೆ.  
 
ಇವರಿಬ್ಬರ ನಡುವೆ ವಾದವಿವಾದಗಳು ನಡೆದು ಪತಿ ತನ್ನ ಪೊಲೀಸ್ ಪಿಸ್ತೂಲನ್ನು ಅವಳತ್ತ ಝುಳುಪಿಸಿದಾಗ ಅವಳು ತಪ್ಪಿಸಿಕೊಳ್ಳಲು ಓಡಿದಳು.  ಆಗ  ಪೊಲೀಸ್ ಅಧಿಕಾರಿ, ಪತ್ನಿಯ ಮೇಲೆ ಗುಂಡುಗಳ ಸುರಿಮಳೆ ಸುರಿಸಿದಾಗ  ಪತ್ನಿ ಪಾರ್ಕ್ ಮಾಡಲಾದ ಕಾರಿನ ಬಳಿಕ ನೆಲದ ಮೇಲೆ ಬಿದ್ದಿದ್ದನ್ನು ವಿಡಿಯೊ ದೃಶ್ಯ ತೋರಿಸಿದೆ.
 
 ನಂತರ ಆ ವ್ಯಕ್ತಿ  ತನ್ನ ಮನೆಯೊಳಗೆ ಚಿಲಕ ಹಾಕಿಕೊಂಡು ಕುಳಿತಿದ್ದ ಎಂದು ಪೊಲೀಸರು ಹೇಳಿದ್ದಾರೆ.  ಪೊಲೀಸರು, ಪೊಲೀಸ್ ಅಧಿಕಾರಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ