ಮಾಂಸಹಾರ ಅಡುಗೆ ಮಾಡದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?

ಬುಧವಾರ, 29 ನವೆಂಬರ್ 2023 (09:56 IST)
ಆರೋಪಿ ಪತಿ ಲಿಯಾಕತ್ ತನ್ನ ಪತ್ನಿಗೆ ಮಟನ್ ಮಾಡಿಕೊಡುವಂತೆ ಕೋರಿದ್ದಾನೆ. ಆದರೆ, ಮನೆಯಲ್ಲಿ ಮಟನ್ ಮಾಡುವ ಮಸಾಲೆ ವಸ್ತುಗಳಿಲ್ಲವಾದ್ದರಿಂದ ಮಟನ್ ಮಾಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡು  ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.  ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
 
ಕುಡಿದ ಮತ್ತಿನಲ್ಲಿದ್ದ ಪತಿ ಮಹಾಶಯನೊಬ್ಬ ತಾನು ಕೋರಿದರೂ ಪತ್ನಿ ಮಟನ್ ಮಾಡಲಿಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ಸಜೀವವಾಗಿ ದಹಿಸಿದ ಘಟನೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.  
 
ಬೆಂಕಿಯಿಂದ ಗಾಯಗೊಂಡ 25 ವರ್ಷದ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.  
 
ಜಬಲ್‌ಪುರ್‌ನ ಚಾಂದಿನಿ ಚೌಕ್ ಪ್ರದೇಶದಲ್ಲಿ ದಂಪತಿಗಳು ವಾಸಿಸುತ್ತಿದ್ದರು. ಆಕೆಯ ಪತಿ ಲಿಯಾಕತ್ ಖಾನ್ ಇದೊಂದು ಅಕಸ್ಮಿಕ ಘಟನೆ ಎಂದು ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಿಸಿದನಾದರೂ ಪೊಲೀಸರ ವಿಚಾರಣೆ ವೇಳೆ ತಾನೇ ಪತ್ನಿಗೆ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾನೆ.  
 
ಏತನ್ಮಧ್ಯೆ, ಪತ್ನಿ ಶಬನಮ್ ವೈದ್ಯರಿಗೆ ಪತಿಯ ಹೇಯ ಕೃತ್ಯದ ಬಗ್ಗೆ ಮಾಹಿತಿ ನೀಡಿದಾಗ, ಆರೋಪಿ ಪತಿ ಆಸ್ಪತ್ರೆಯಿಂದ ಪರಾರಿಯಾಗಲು ಪ್ರಯತ್ನಿಸಿದ. ಆದರೆ, ಆಸ್ಪತ್ರೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ