ಕಾರಿನಲ್ಲಿ ಭಿಕ್ಷುಕನ ಜೊತೆ ಪತ್ನಿ ಲವ್ವಿ ಡವ್ವಿ: ಶಾಕ್ ಆದ ಪತಿ

ಮಂಗಳವಾರ, 22 ಮಾರ್ಚ್ 2022 (09:00 IST)
ಬ್ರೆಸಿಲಿಯಾ: ಭಿಕ್ಷುಕನ ಜೊತೆ ಪತ್ನಿ ಕಾರಿನೊಳಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಿ ಶಾಕ್ ಆದ ಪತಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ. ಈ ಘಟನೆ ನಡೆದಿರುವುದು ಬ್ರೆಜಿಲ್ ನಲ್ಲಿ.

ಇಡೀ ಘಟನೆ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪತ್ನಿಯನ್ನು ಅರಸಿ ಬಂದ ಪತಿಗೆ ಕಾರಿನೊಳಗೆ ಆಕೆ ಭಿಕ್ಷುಕನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಇದನ್ನು ನೋಡಿ ಕೋಪಗೊಂಡ ಪತಿ ಕಾರಿನ ಗಾಜು ಒಡೆದು ಇಬ್ಬರ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪತ್ನಿ ತಪ್ಪಿಸಿಕೊಂಡಿದ್ದಾಳೆ. ಆದರೆ ಭಿಕ್ಷುಕ ಕೈಗೆ ಸಿಕ್ಕಿದ್ದು, ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಪತ್ನಿಯನ್ನೂ ತರಾಟೆಗೆ ತೆಗೆದುಕೊಂಡಿದ್ದಾನೆ. ಇದೀಗ ಹಲ್ಲೆಗೊಳಗಾದ ಭಿಕ್ಷುಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ