ಕರಾವಳಿಯಲ್ಲಿ ಅತಿವೃಷ್ಟಿಯಿಂದ ಅಡಿಕೆ ಬೆಳೆಗೆ ರೋಗಬಾಧೆ: ಕೃಷಿಕರಿಗೆ ಡಬಲ್‌ ಹೊಡೆತ

Sampriya

ಬುಧವಾರ, 3 ಸೆಪ್ಟಂಬರ್ 2025 (21:27 IST)
Photo Credit X
ಮಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರಿಂದ ಕೃಷಿಕರು ಕಂಗಾಲಾಗಿದ್ದಾರೆ. ಅಡಿಕೆ ಮರಗಳಲ್ಲಿ ಉಳಿದ ಬೆಳೆಯನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. 

ಕರಾವಳಿ ಪ್ರದೇಶದಲ್ಲಿ ಕಳೆದ ಕೆಲ‌ ದಿನಗಳಿಂದ ನಿರಂತರವಗಿ ಸುರಿಯುತ್ತಿರುವುದರಿಂದ ಮಳೆಯಿಂದಾಗಿ ರೋಗದಿಂದಾಗಿ ಕಾಯಿ ಅಡಿಕೆಗಳು‌ ಬೀಳುತ್ತಿದ್ದು,  ಇದರಿಂದ ರೈತರು ಕಂಗಲಾಗಿದ್ದಾರೆ. ಒಂದೆಡೆ ಅಡಿಕೆ ಧಾರಣೆ ಕುಸಿತದ ಬಿಸಿ ತಟ್ಟಿದರೆ, ಮತ್ತೊಂದೆಡೆ ಇಳುವರಿ ಮೇಲೆ ನೇರ ಪರಿಣಾಮ ಬೀರುತ್ತಿದೆ. 

ನಿರಂತರ ಮಳೆಯಿಂದಾಗಿ ಕೊಯ್ಲಿ ಮಾಡಿರುವ ಅಡಿಕೆಗಳನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಕಾಯಿ ಅಡಿಕೆಗಳು ಉದುರುತ್ತಿದೆ. ಇದು‌ ಮುಂದಿನ ಅಡಿಕೆ‌ ಇಳುವರಿ‌ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಬೆಳ್ತಂಗಡಿ ತಾಲ್ಲೂಕಿನ ಮರೋಡಿಯ ಅಡಿಕೆ ಬೆಳೆಗಾರ ಲಿಂಗಪ್ಪ ಪೂಜಾರಿ ಹೇಳಿದ್ಧರೆ. 

ಇನ್ನೂ‌ ಕಳೆದ ಕೆಲ‌‌ ದಿನಗಳಿಂದ‌ ಕರಾವಳಿ‌ ಭಾಗದಲ್ಲಿ‌ ಭಾರೀ‌ ಮಳೆಯಾಗುತ್ತಿದೆ. ಇದರಿಂದ ಸೀಪೆ ಕಾಯಿ, ಸಪೋಟಾದ ಕಾಯಿಗಳು ಉದುರುತ್ತಿದೆ. ಇದು‌ ನಿರಂತರ ಮಳೆಯ ಪರಿಣಾಮ‌ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೆ ನಿರಂತರ ಮಳೆಯಿಂದಾಗಿ ಎಂದಿನಂತೆ ಆಗಬೇಕಾಗಿರುವ ತೋಟದ ಕೆಲಸಗಳಿಗೂ ಹಿನ್ನಡೆಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ