ಐಸಿಜೆ ಮಹತ್ವದ ತೀರ್ಪು: ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಡೆ

ಗುರುವಾರ, 18 ಮೇ 2017 (16:02 IST)
ಪಾಕಿಸ್ತಾನ ಸೇನಾ ನ್ಯಾಯಾಲಯ ಕುಲಭೂಷಣ್ ಜಾಧವ್‌ಗೆ ವಿಧಿಸಿದ ಗಲ್ಲು ಶಿಕ್ಷೆಗೆ ನೆಗರ್‌ಲ್ಯಾಂಡ್‌ನ ಹೇಗ್‌ ನಗರದಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿ ರೋನಿ ಅಬ್ರಹಾಂ, ತಡೆ ನೀಡಿ ಆದೇಶ ಹೊರಡಿಸಿದ್ದಾರೆ.
 
ಭಾರತದ ಮನವಿಯನ್ನು ಎತ್ತಿಹಿಡಿದ ಇಂಟರ್‌ನ್ಯಾಷನಲ್ ಕೋರ್ಟ್ ಫಾರ್ ಜಸ್ಟಿಸ್(ಐಸಿಜೆ) ಅಂತಿಮ ತೀರ್ಪು ಬರುವವರೆಗೆ ಜಾಧವ್‌ರನ್ನು ಗಲ್ಲಿಗೇರಿಸುವಂತಿಲ್ಲ ಎಂದು  ಆದೇಶದಲ್ಲಿ ತಿಳಿಸಿದೆ. ಇದರಿಂದ ಭಾರತಕ್ಕೆ ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಐತಿಹಾಸಿಕ ಜಯ ದೊರೆತಂತಾಗಿದೆ.
 
ಜಾಧವ್‌ಗೆ ಗಲ್ಲು ಶಿಕ್ಷೆ ಜಾರಿಯಾಗದಂತೆ ಪಾಕಿಸ್ತಾನ ಸರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಅಬ್ರಾಹಂ ನೀಡಿದ ಆದೇಶ ಪಾಕಿಸ್ತಾನಕ್ಕೆ ಮುಖಭಂಗವಾದಂತಾಗಿದೆ.
 
ಕುಲಭೂಷಣ್ ಪ್ರಾಣಕ್ಕೆ ಅಪಾಯವಿದೆ ಎನ್ನುವ ಭಾರತದ ವಾದಕ್ಕೆ ಸಹಮತ ವ್ಯಕ್ತಪಡಿಸಿದ ಕೋರ್ಟ್, ಜಾಧವ್‌ಗೆ ಸೂಕ್ತ ಭದ್ರತೆ ನೀಡುವಂತೆ ಆದೇಶಿಸಿದೆ.
 
ಐಸಿಜೆ ತೀರ್ಪಿನಿಂದ ಕುಗ್ಗಿರುವ ಪಾಕಿಸ್ತಾನ, ಜಾಧವ್ ಪ್ರಕರಣ ಐಸಿಜೆ ವ್ಯಾಪ್ತಿಗೆ ಬರುವುದಿಲ್ಲ. ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದ್ದರಿಂದ ವಿಶ್ವಸಂಸ್ಥೆ ವ್ಯಾಪ್ತಿಗೆ ಬರುತ್ತದೆ ಎಂದು ಪ್ರಕರಣ ತಿರುಚಲು ಪ್ರಯತ್ನಿಸಿತು. ಆದರೆ, ನ್ಯಾಯಮೂರ್ತಿ ಪಾಕ್ ವಾದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ