ಮದುವೆಯಾದ ಕೆಲ ಗಂಟೆಗಳಲ್ಲಿ ಪೊಲೀಸರ ಅತಿಥಿಯಾದ ವರ
ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಅಲೋರ್ ಸೆಟಾರ್ ನಾರ್ಥನ್ ಸಿಟಿಯಲ್ಲಿ ಮದುವೆ ನಡೆಯುತ್ತಿದ್ದ ಹೋಟಲ್್ಗೆ ಹೋಗಿದ್ದರು. ಆದರೆ, ಮದುವೆ ಬಂದ ಅತಿಥಿಗಳನ್ನು ಬಂಧಿಸದಂತೆ ವರ ತಡೆದಿದ್ದಾನೆ. ಇದರಿಂದ ವರನನ್ನೇ ಬಂಧಿಸಿ ಪೊಲೀಸರು ಕರೆದೊಯ್ದಿದ್ದಾರೆ.
ಪೊಲೀಸರ ಮೇಲೆ ವರನು ಗ್ಲಾಸ್ ಎಸೆದಿದ್ದು, ಇದರಿಂದ ಅಧಿಕಾರಿಯೊಬ್ಬರ ಎಡಗೈಗೆ ಗಾಯವಾಗಿದೆ. ಈ ನಡುವೆ ಆರೋಪಿ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಮರುದಿನ ಪೊಲೀಸರು ವರನ ಮನೆಗೆ ಹೋಗಿ ಆತನನ್ನು ವಶಕ್ಕೆ ಪಡೆದಿದ್ದಾರೆ.