ಬ್ರಿಟನ್ ನಲ್ಲಿ ಕೊರೋನ ಸೋಂಕು ಏರಿಕೆ

ಬುಧವಾರ, 20 ಅಕ್ಟೋಬರ್ 2021 (09:03 IST)
ಲಂಡನ್, ಅ.20 : ಬ್ರಿಟನ್ ನಲ್ಲಿ ಕಳೆದ 2 ವಾರಗಳಿಂದ ಕೊರೋನ ಸೋಂಕು ಪ್ರಕರಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಸೋಮವಾರ ಒಂದೇ ದಿನ ಸುಮಾರು 50,000 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು, ಇದು ಕಳೆದ ಜುಲೈಯಲ್ಲಿ ಡೆಲ್ಟಾ ರೂಪಾಂತರಿತ ಸೋಂಕು ಉಲ್ಬಣಿಸಿದ ಬಳಿಕ ಒಂದೇ ದಿನ ದಾಖಲಾಗಿರುವ ಅತ್ಯಧಿಕ ಸೋಂಕು ಪ್ರಕರಣವಾಗಿದೆ.

ಸೋಂಕಿನ ವಿರುದ್ಧದ ಲಸಿಕೆಯ ತುರ್ತು ಬಳಕೆಗೆ ಕ್ಷಿಪ್ರವಾಗಿ ಅನುಮೋದನೆ ನೀಡಿದ ಜನತೆಗೆ ಬೃಹತ್ ಲಸಿಕೀಕರಣ ಅಭಿಯಾನದಿಂದ ಸೋಂಕನ್ನು ನಿಯಂತ್ರಿಸಲು ಯಶಸ್ವಿಯಾಗಿರುವುದಾಗಿ ಬ್ರಿಟನ್ ಸರಕಾರ ಘೋಷಿಸಿದ ಬೆನ್ನಲ್ಲೇ ಏಕಾಏಕಿ ಸೋಂಕು ಪ್ರಕರಣ ಏರುಗತಿಗೆ ತಿರುಗಿದ್ದು ಸರಕಾರ ಹೇಳಿಕೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ. ಜೊತೆಗೆ ದೈನಂದಿನ ಮರಣದ ಪ್ರಮಾಣ 100ಕ್ಕಿಂತ ಹೆಚ್ಚಿದ್ದು ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 1,38,000ಕ್ಕೇರಿದ್ದು, ಯುರೋಪ್ನಲ್ಲಿ ರಶ್ಯಾದ ಬಳಿಕ ಇದು ಅತ್ಯಧಿಕವಾಗಿದೆ.
ಫ್ರಾನ್ಸ್ ನಲ್ಲಿ ನಂದಿನ ಸೋಂಕಿನ ಪ್ರಮಾಣ 4000 ಮತ್ತು ಸಾವಿನ ಪ್ರಮಾಣ 30 ಆಗಿದ್ದರೆ, ಜರ್ಮನಿಯಲ್ಲಿ ಇದು ಅನುಕ್ರಮವಾಗಿ 10,000 ಮತ್ತು 60 ಆಗಿದೆ. ಆಸ್ಪತ್ರೆಗೆ ದಾಖಲಾಗುವ ದೈನಂದಿನ ಪ್ರಮಾಣ ಫ್ರಾನ್ಸ್ ನಲ್ಲಿ ಸುಮಾರು 150 ಆಗಿದ್ದರೆ ಬ್ರಿಟನ್ನಲ್ಲಿ ಈಗ 900ಕ್ಕೂ ಅಧಿಕವಾಗಿದೆ. ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್, ಜರ್ಮನಿ ಮತ್ತು ನೆದರಲ್ಯಾಂಡ್ಗಳಲ್ಲೂ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ