ಕೊರೋನಾ ಭಯ ಬೇಡ.. ತಜ್ಞರ ಅಭಯಹಸ್ತ..

ಮಂಗಳವಾರ, 19 ಅಕ್ಟೋಬರ್ 2021 (16:05 IST)
1  ಹಾಗೂ 2ನೇ ಅಲೆಗಳಿಗಿಂತ ಮೂರನೇ ಅಲೆ ಇನ್ನೂ ಭಯಾನಕವಾಗಿರುತ್ತೆ ಎಂದು ತಜ್ಞರು ಹೇಳಿದ್ದರು. ಮುಂಜಾಗ್ರತಾ ಕ್ರಮವಾಗಿ ಸರ್ಕಾರಗಳು ವೈದ್ಯಕೀಯ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಯಾಕೆಂದರೆ ಕೊರೋನಾ 2ನೇ ಅಲೆ ವೇಳೆ ಬೆಡ್​, ಆಕ್ಸಿಜನ್ ಸಿಗದೇ ಸಾವಿರಾರು ಮಂದಿ ಅಸುನೀಗಿದ್ದರು. ಈ ಘಟನೆ ಮರುಕಳಿಸಬಾರದೆಂದು ಸರ್ಕಾರಗಳು ಪ್ರಯತ್ನ ಮೀರಿ ಸಿದ್ದತೆ ಮಾಡಿಕೊಂಡಿದ್ದವು. ಮಕ್ಕಳನ್ನು ಹೆಚ್ಚಾಗಿ ಭಾದಿಸುತ್ತೆ ಎಂದು ಹೇಳಲಾಗಿದ್ದ ಕೊರೋನಾ 3ನೇ ಅಲೆ ಈಗ ಸದ್ದಿಲ್ಲದಂತೆ ಮಾಯವಾಗಿದೆ. ದಿನಕ್ಕೆ ಸಾವಿರಗಟ್ಟಲೇ ಕೇಸ್​ಗಳು ದಾಖಲಾಗುತ್ತಿದ್ದ ಕರ್ನಾಟಕದಲ್ಲಿ ಈಗ ಬೆರಳೆಣಿಕೆಯಷ್ಟು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಶುಭ ಸೂಚನೆನ್ನು ತೋರಿಸುತ್ತಿದೆ.ಕರ್ನಾಟಕದಲ್ಲಿ ಸದ್ಯ ಕೊರೋನಾ ಮೂರನೇ ಅಲೆಯ ಭಯವಿಲ್ಲ. ನವೆಂಬರ್ ವೇಳೆಗೆ ಕೋವಿಡ್ 3ನೇ ಅಲೆ ಅಪ್ಪಳಿಸುತ್ತದೆ, ಇದು ತುಂಬಾ ಭಯಾನಕವಾಗಿರುತ್ತದೆ ಎಂದು ಹೇಳಿದ್ದ ತಜ್ಞರ ಲೆಕ್ಕಾಚಾರ ತಲೆಕೆಳಕಾಗಿದೆ. ಅದೃಷ್ಟ ಎನ್ನುವಂತೆ ಕೊರೋನಾ ಜನರಿಂದ ದೂರಾಗುತ್ತಿದೆ. ಇನ್ನು ಕೊರೋನಾ ಮೂರನೇ ಅಲೆಯ ಭಯವಿಲ್ಲ ಎಂದು ಆರೋಗ್ಯ ತಜ್ಞರು ರಾಜ್ಯದ ಜನರಿಗೆ ಅಭಯ ನೀಡಿದ್ದಾರೆ. ಈ ಹಿಂದೆ ನವೆಂಬರ್ ವೇಳೆಗೆ ಮೂರನೇ ಅಲೆ ಬರುತ್ತೆ ಎಂದು ತಜ್ಞರು ಹೇಳಿದ್ದರು. ಆದ್ರೆ ಅಕ್ಟೋಬರ್ ವೇಳೆಗೆ ಕೊರೋನಾ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುತ್ತಿದೆ. ಜೊತೆಗೆ ಹೊಸ ರೂಪಾಂತರಿಗಳು ಸಹ ಪತ್ತೆಯಾಗುತ್ತಿಲ್ಲ. ಇದು ಜನರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ