ಡ್ರಗ್ಸ್ ಕಳ್ಳ ಸಾಗಣೆಯಲ್ಲಿ ಪಾಕಿಸ್ತಾನಿಯರ ಸಂಖ್ಯೆ ಹೆಚ್ಚಳ; ದುಬೈ ರಾಷ್ಟ್ರಗಳಿಗೆ ಅಪಾಯ!
ಗುರುವಾರ, 5 ಏಪ್ರಿಲ್ 2018 (16:26 IST)
ದುಬೈ : ದುಬೈಗೆ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿರುವ ಪಾಕಿಸ್ಥಾನೀಯರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ, ಕೊಲ್ಲಿ ಸಮುದಾಯದ ಸದಸ್ಯರಿಗೆ ಪಾಕ್ ಡ್ರಗ್ಸ್ ಪಿಡುಗಿನಿಂದ ಗಂಭೀರ ಅಪಾಯವಿದೆ ಎಂದು ಉನ್ನತ ಎಮಿರೇಟ್ ಭದ್ರತಾ ಅಧಿಕಾರಿಯೋರ್ವರು, ಎಚ್ಚರಿಕೆ ನೀಡಿದ್ದಾರೆ.
ದುಬೈಯಲ್ಲಿನ ಭದ್ರತಾ ಅಧಿಕಾರಿಗಳು ಇತ್ತೀಚೆಗೆ ಹಲವು ಡ್ರಗ್ ಜಾಲಗಳನ್ನು ಭೇದಿಸಿದ್ದಾರೆ. ಈ ಜಾಲಗಳಲ್ಲಿ ಪಾಕಿಸ್ಥಾನೀಯರೇ ಅಧಿಕ ಸಂಖ್ಯೆಯಲ್ಲಿರುವುದು ಬಹಿರಂಗವಾಗಿದೆ.
‘ನಮ್ಮ ದೇಶಕ್ಕೆ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡಿ ತರುತ್ತಿರುವ ಪಾಕಿಸ್ಥಾನೀಯರು ಕೊಲ್ಲಿ ಸಮುದಾಯದ ಜನರಿಗೆ ಗಂಭೀರ ಬೆದರಿಕೆಯಾಗಿ ಪರಿಣಮಿಸಿದ್ದಾರೆ ಎಂದು ಖಲ್‌ಫಾನ್ ಅವರು ಟ್ವಿಟರ್‌ನಲ್ಲಿ ಅರೇಬಿಕ್ ಲಿಪಿಯಲ್ಲಿ ಬರೆದು ಎಚ್ಚರಿಸಿದ್ದಾರೆ. ಡ್ರಗ್ ಕಳ್ಳಸಾಗಣೆಯಲ್ಲಿ ಈಚೆಗೆ ಸಿಕ್ಕಿ ಬಿದ್ದಿರುವ ಮೂವರು ಪಾಕಿಸ್ಥಾನೀಯರ ಫೋಟೋಗಳನ್ನು ಕೂಡ ಅಪ್‌ಲೋಡ್ ಮಾಡಿದ್ದಾರೆ’.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ