ಡೊನಾಲ್ಡ್ ಟ್ರಂಪ್ ಹೀಗೇ ಮಾಡ್ತಿದ್ದರೆ ಭಾರತಕ್ಕೆ ಇದೊಂದೇ ದಾರಿ ಉಳಿಯೋದು

Krishnaveni K

ಗುರುವಾರ, 7 ಆಗಸ್ಟ್ 2025 (10:06 IST)
ನವದೆಹಲಿ: ರಷ್ಯಾ ಜೊತೆಗೆ ಭಾರತದ ತೈಲ ಖರೀದಿ ವಿರುದ್ಧ ಸಿಟ್ಟಿಗೆದ್ದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ 25% ಸುಂಕ ವಿಧಿಸಿದ್ದಾರೆ. ಇದು ಹೀಗೇ ಮುಂದುವರಿದರೆ ಭಾರತಕ್ಕೆ ಇರುವುದು ಇದೊಂದೇ ದಾರಿ. ಏನದು ಇಲ್ಲಿ ನೋಡಿ.

ಅಮೆರಿಕಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಬಹುತೇಕ ರಾಷ್ಟ್ರಗಳು ಈಗ ಡೊನಾಲ್ಡ್ ಟ್ರಂಪ್ ಟಾರಿಫ್ ಸುಳಿಗೆ ಸಿಲುಕಿದ್ದಾರೆ. ತನ್ನ ಮಾತು ಕೇಳದ ರಾಷ್ಟ್ರಗಳ ಮೇಲೆ ಟ್ರಂಪ್ ಹಿಗ್ಗಾಮುಗ್ಗಾ ಸುಂಕ ವಿಧಿಸುತ್ತಿದ್ದಾರೆ. ಇದಕ್ಕೀಗ ಭಾರತವೂ ಬಲಿಯಾಗಿದೆ.

ಈಗಾಗಲೇ ಟ್ರಂಪ್ ಸುಂಕ ಸಮರದ ವಿರುದ್ಧ ಬಹುತೇಕ ರಾಷ್ಟ್ರಗಳು ತಿರುಗಿಬಿದ್ದಿವೆ. ಬ್ರೆಜಿಲ್, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಭಾರತವನ್ನು ಬೆಂಬಲಿಸಿವೆ. ಭಾರತ ಒಂದು ಸಾರ್ವಭೌಮ ರಾಷ್ಟ್ರ. ಅದರ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಅಮೆರಿಕಾಗಿಲ್ಲ ಎಂದು ಟ್ರಂಪ್ ಸ್ವಪಕ್ಷೀಯ ನಿಕ್ಕಿ ಹ್ಯಾಲಿ ಟೀಕಿಸಿದ್ದಾರೆ.

ಟ್ರಂಪ್ ಟಾರಿಫ್ ವಾರ್ ಇದೇ ರೀತಿ ಮುಂದುವರಿದರೆ ಭಾರತ ಏಷ್ಯಾದ ಪ್ರಬಲ ರಾಷ್ಟ್ರಗಳಾದ ಜಪಾನ್, ಚೀನಾ, ರಷ್ಯಾ ಜೊತೆಗಿನ ಸಂಬಂಧ ಗಟ್ಟಿಗೊಳಿಸುವುದು ಮತ್ತು ಏಷ್ಯಾದ ಪ್ರಬಲ ರಾಷ್ಟ್ರಗಳು ಒಗ್ಗಟ್ಟಾಗಿ ವ್ಯಾಪಾರ, ವ್ಯವಹಾರ ನಡೆಸುವುದು. ಅತಿಯಾಗಿ ಅಮೆರಿಕಾವನ್ನು ಅವಲಂಬಿಸದೇ ಏಷ್ಯಾ ರಾಷ್ಟ್ರಗಳೇ ಪರಸ್ಪರ ಸಹಕಾರದೊಂಗೆ ಸಂಬಂಧ ವೃದ್ದಿ ಮಾಡಿದರೆ ಅಮೆರಿಕಾಗೆ ಅದು ದೊಡ್ಡ ಹೊಡೆತವಾಗಲಿದೆ. ಹೀಗಾಗಿ ಇದೇ ತಿಂಗಳ ಅಂತ್ಯಕ್ಕೆ ಪ್ರಧಾನಿ ಮೋದಿ ಜಪಾನ್ ಭೇಟಿ ಮತ್ತು ಶಾಂಘೈ ಶೃಂಗದಲ್ಲಿ ಪಾಲ್ಗೊಳ್ಳಲು ಚೀನಾಗೆ ಭೇಟಿ ನೀಡುತ್ತಿರುವುದು ಮಹತ್ವದ ಬೆಳವಣಿಗೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ