ಸ್ವಾತಂತ್ರ್ಯಕ್ಕೆ ದಿನಕ್ಕೆ ಪ್ರಧಾನಿ ಮೋದಿ ಏನು ಭಾಷಣ ಮಾಡಬೇಕು, ನೀವೇ ನಿರ್ಧರಿಸಲು ಇಲ್ಲಿದೆ ಅವಕಾಶ
ಪ್ರಧಾನಿ ಮೋದಿ ಆಗಸ್ಟ್ 15 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಲಿದ್ದಾರೆ. ಈ ಭಾಷಣದಲ್ಲಿ ಏನೆಲ್ಲಾ ಅಂಶಗಳು ಇರಬೇಕು ಎಂದು ಈಗ ಜನರೇ ನಿರ್ಧರಿಸಬಹುದು. ಇದಕ್ಕೆ ಸಾರ್ವನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಜನರಿಂದ ಸಲಹೆಗಳನ್ನು ಕೇಳಿದ್ದಾರೆ.
ನನ್ನ ಭಾಷಣದಲ್ಲಿ ಯಾವುದೆಲ್ಲಾ ವಿಚಾರಗಳಿರಬೇಕು ಎಂಬುದನ್ನು ಭಾರತೀಯರಾದ ನೀವು ಸಲಹೆ ನೀಡಿ. ನನ್ನ ಭಾಷಣದಲ್ಲಿ ಯಾವ ಐಡಿಯಾ, ವಿಷಯ ಇರಬೇಕು ಎಂಬುದನ್ನು ನೀವೇ ನಿರ್ಧರಿಸಿ. ನಿಮ್ಮ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಳ್ಳಿ ಎಂದು ಹೇಳಿದ್ದಾರೆ.