ವ್ಯಾಪಾರ ಮಾತುಕತೆ ಸ್ಥಗಿತಗೊಳಿಸಿದ ಭಾರತ!

ಭಾನುವಾರ, 16 ಏಪ್ರಿಲ್ 2023 (14:39 IST)
ಲಂಡನ್ : ಖಲಿಸ್ತಾನ್ ಪರ ಪ್ರತಿಭಟನೆ ನಡೆಸಿದ ಹೋರಾಟಗಾರರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಯುನೈಟೆಡ್ ಕಿಂಗ್ಡಮ್ ಜೊತೆ ಮುಕ್ತ ವ್ಯಾಪಾರ ಮಾತುಕತೆಯನ್ನು ಭಾರತ ಸ್ಥಗಿತಗೊಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮಾರ್ಚ್ 19 ರಂದು ಲಂಡನ್ನಲ್ಲಿರುವ ಭಾರತದ ಹೈಕಮೀಷನ್ ಕಚೇರಿ ಮುಂಭಾಗ ಖಲಿಸ್ತಾನಿ ಪರ ಬೆಂಬಲಿಗರು ಪ್ರತಿಭಟನೆ ನಡೆಸಿ ಭಾರತದ ಧ್ವಜವನ್ನು ಎಸೆದು ಖಲಿಸ್ತಾನಿ ಧ್ವಜ ಹಾರಿಸಿದ್ದರು. ಈ ಘಟನೆಯ ಬಗ್ಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಭಾರತ ಹೋರಾಟಗಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು.

ಸೂಚನೆಯ ಹೊರತಾಗಿಯೂ ಯುಕೆ ಸರ್ಕಾರ ಈ ಘಟನೆಯನ್ನು ಖಂಡಿಸುವಲ್ಲಿ ಮತ್ತು ಹೋರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಯುಕೆ ಜೊತೆಗಿನ ವ್ಯಾಪಾರ ಮಾತುಕತೆಯನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ