ನೇಪಾಳದಲ್ಲಿ ಹಿಂಸಾಚಾರವಾದರೆ ಅದಕ್ಕೆ ಭಾರತವೇ ಕಾರಣವಂತೆ: ಕೆಪಿ ಶರ್ಮಾ ಓಲಿ ಆರೋಪ

Krishnaveni K

ಗುರುವಾರ, 11 ಸೆಪ್ಟಂಬರ್ 2025 (10:13 IST)
ಕಠ್ಮಂಡು: ನೇಪಾಳದಲ್ಲಿ ಈಗ ಸೃಷ್ಟಿಯಾಗಿರುವ ರಾಜಕೀಯ ಅರಾಜಕತೆಗೆ ಭಾರತವೇ ಕಾರಣ ಎಂದು ರಾಜೀನಾಮೆ ನೀಡಿರುವ ಪ್ರಧಾನಿ ಕೆಪಿ ಶರ್ಮಾ ಓಲಿ ಪರೋಕ್ಷವಾಗಿ ಆರೋಪಿಸಿದ್ದಾರೆ.

ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು ಎಂದು ಕೆಪಿ ಶರ್ಮಾ ಆರೋಪಿಸಿದ್ದಾರೆ. ಈ ಹಿಂದೆ ಅಯೋಧ್ಯೆಯಲ್ಲಿ ರಾಮನ ಜನನವಾಗಿದೆ ಎಂಬ ಭಾರತದ ನಿಲುವನ್ನು ವಿರೋಧಿಸಿದ್ದೆ. ರಾಮನ ಜನ್ಮಸ್ಥಳ ನೇಪಾಳದಲ್ಲಿರುವ ಅಯೋಧ್ಯೆ ಎಂದಿದ್ದೆ. ಅಲ್ಲದೆ ವಿವಾದಿತ ಭೂ ಪ್ರದೇಶ ಲಿಪುಲೇಖ್ ನೇಪಾಳದ್ದು ಎಂದಿದ್ದೆ. ಇದೇ ಕಾರಣಕ್ಕೆ ನನ್ನ ಅಧಿಕಾರ ಹೋಯ್ತು ಎಂದು ಕೆಪಿ ಶರ್ಮಾ ಹೇಳಿದ್ದಾರೆ.

ಆ ಮೂಲಕ ತಮ್ಮ ಅಧಿಕಾರ ಹೋಗಲು ಭಾರತವೇ ಕಾರಣ ಎಂದು ಪರೋಕ್ಷವಾಗಿ ಹೇಳಿದಂತಾಗಿದೆ. ಲಿಪುಲೇಖ್ ಭಾರತ ಮತ್ತು ನೇಪಾಳವನ್ನು ಒಳಗೊಂಡ ವಿವಾದಿತ ಭೂ ಪ್ರದೇಶವಾಗಿದೆ. ಇದು ನಮ್ಮದು ಎಂದು ನೇಪಾಳ ಹೇಳಿದರೆ ಭಾರತ ಇದು ನೇಪಾಳಕ್ಕೆ ಸೇರಿದ್ದಲ್ಲ ಎನ್ನುತ್ತಿದೆ.

ಈಗ ನೇಪಾಳದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಇದೇ ಕಾರಣಕ್ಕೆ ಭಾರತವೇ ಕುಮ್ಮಕ್ಕು ನೀಡಿದೆ ಎಂದು ಕೆಪಿ ಶರ್ಮಾ ಪರೋಕ್ಷವಾಗಿ ಆರೋಪ ಮಾಡಿದ್ದಾರೆ. ಈ ನಡುವೆ ಭಾರತದ ಪರವಾಗಿರುವ ಸುಶೀಲಾ ಕರ್ಕಿ ನೇತೃತ್ವದಲ್ಲಿ ನೇಪಾಳದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ ಎಂದು ಸುದ್ದಿ ಹರಿದಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ