ಚೀನಾವನ್ನು ತರಾಟೆಗೆ ತೆಗೆದುಕೊಂಡ ಭಾರತ

ಭಾನುವಾರ, 28 ಆಗಸ್ಟ್ 2022 (12:09 IST)
ಕೊಲಂಬೋ : ಶ್ರೀಲಂಕಾದ ಹಂಬಂಟೋಟಾ ಬಂದರಿನಲ್ಲಿ ಚೀನಾ ತನ್ನ ಹೈಟೆಕ್ ಹಡಗನ್ನು ನಿಲ್ಲಿಸಿದ್ದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರಕ್ಕೆ ಚೀನಾ ಭಾರತದ ಕುರಿತು ಟೀಕೆಗಳನ್ನು ಮಾಡಿದ್ದು, ಇದೀಗ ಭಾರತವೂ ಚೀನಾಗೆ ಟಾಂಗ್ ನೀಡಿದೆ.

ಭಾರತದ ದೃಷ್ಟಿಕೋನ ಹೇಗಿದೆ ಎಂಬುದನ್ನು ಅದರ ವರ್ತನೆಯಿಂದಲೇ ಬಣ್ಣಿಸಬಹುದು ಎಂದು ಚೀನಾದ ರಾಯಭಾರಿ ಕ್ವಿ ಝೆನ್ಹಾಂಗ್ ಹೇಳಿಕೆ ನೀಡಿದ್ದರು. ಇದಕ್ಕೆ ಚೀನಾವನ್ನು ತರಾಟೆಗೆ ತೆಗೆದುಕೊಂಡ ಭಾರತ, ಇದೀಗ ಶ್ರೀಲಂಕಾಗೆ ಬೇಕಾಗಿರುವುದು ಬೆಂಬಲ. ಅನಗತ್ಯ ಒತ್ತಡ ಅಥವಾ ವಿವಾದವಲ್ಲ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ಹೇಳಿದೆ.

ಚೀನಾ ರಾಯಭಾರಿಯವರ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಅವರ ಮೂಲ ರಾಜತಾಂತ್ರಿಕ ಶಿಷ್ಟಾಚಾರದ ಉಲ್ಲಂಘನೆ ವೈಯಕ್ತಿಕ ಲಕ್ಷಣವಾಗಿರಬಹುದು ಅಥವಾ ದೊಡ್ಡ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸಬಹುದು ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ಟ್ವೀಟ್ನಲ್ಲಿ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ