ಏಷ್ಯಾ ಕಪ್ ಕ್ರಿಕೆಟ್: ವಿರಾಟ್ ಕೊಹ್ಲಿ ಇಂದು ಮಾಡಲಿರುವ ದಾಖಲೆಯನ್ನು ಯಾವ ಭಾರತೀಯರೂ ಮಾಡಿಲ್ಲ
ವಿರಾಟ್ ಕೊಹ್ಲಿ ಇಂದು 100 ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಲಿದ್ದಾರೆ. ಆ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಅಪರೂಪದ ದಾಖಲೆ ಮಾಡಲಿದ್ದಾರೆ.
ಕೊಹ್ಲಿ ಈಗಾಗಲೇ ಫಾರ್ಮ್ ಗೆ ಮರಳಲು ಹೆಣಗಾಡುತ್ತಿದ್ದು, ಈ ಪಂದ್ಯದಲ್ಲಿ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ ಅದು ಅವಿಸ್ಮರಣೀಯ ಇನಿಂಗ್ಸ್ ಆಗಲಿದೆ.