ಕೈ ಕುಲುಕಲು ಬಂದ ಪಾಕ್ ಅಧಿಕಾರಿಗೆ ಭಾರತೀಯ ಅಧಿಕಾರಿ ಕೊಟ್ಟ ಉತ್ತರವಿದು!

ಮಂಗಳವಾರ, 16 ಮೇ 2017 (13:06 IST)
ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ವೈರತ್ವ ಎಷ್ಟು ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭೇಟಿಯಾದ ಪಾಕ್ ಅಧಿಕಾರಿಗೆ ಭಾರತದ ಹಿರಿಯ ರಾಯಭಾರಿಯೊಬ್ಬರು ಕೊಟ್ಟ ಉತ್ತರ ಇದಾಗಿತ್ತು.

 
ಕುಲಭೂಷಣ್ ಜಾದವ್ ಪ್ರಕರಣವನ್ನು ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ಐಸಿಜೆ ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ಉನ್ನತಾಧಿಕಾರಿಗಳು ತಮ್ಮ ತಮ್ಮ ದೇಶವನ್ನು ಪ್ರತಿನಿಧಿಸುತ್ತಿವೆ.

ಈ ಸಂದರ್ಭದಲ್ಲಿ ಪರಸ್ಪರ ಮುಖಾ ಮುಖಿಯಾದಾಗ ಕೈ ಕುಲುವುದು ಸಾಮಾನ್ಯ ಪದ್ಧತಿ. ಆದರೆ ಭಾರತದ ಹಿರಿಯ ರಾಯಭಾರಿ ದೀಪಕ್ ಮಿತ್ತಲ್ ತಮಗೆ ಕೈ ಕುಲುಕಲು ಬಂದ ಪಾಕ್ ಅಧಿಕಾರಿ ಮೊಹಮ್ಮದ್ ಫೈಸಲ್ ಗೆ ಕೈ ಕುಲುಕುವ ಬದಲು ನಮಸ್ಕಾರ ಎಂದು ಪ್ರತಿಕ್ರಿಯಿಸಿದ್ದಾರೆ. ಇದೀಗ ಭಾರೀ ಸುದ್ದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ