ಕೊವಿಡ್ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ: ಐಸಿಎಂಆರ್ ಮಹತ್ವದ ಸಂದೇಶ

Krishnaveni K

ಬುಧವಾರ, 2 ಜುಲೈ 2025 (11:49 IST)
ನವದೆಹಲಿ: ಇತ್ತೀಚೆಗೆ ಚಿಕ್ಕವಯಸ್ಸಿನವರೂ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೊವಿಡ್ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ ಎಂದು ಐಸಿಎಂಆರ್ ಮತ್ತು ಏಮ್ಸ್ ಸಂಶೋಧನೆ ನಡೆಸಿದ್ದು ಮಹತ್ವದ ಸಂದೇಶ ನೀಡಿದೆ.

ಇಂಡಿಯನ್ ಮೆಡಿಕಲ್ ರಿಸರ್ಚ್ ಸಂಸ್ಥೆ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಈ ಬಗ್ಗೆ ಸಂಶೋಧನೆಯೊಂದನ್ನು ನಡೆಸಿದೆ. ಹೃದಯಾಘಾತಕ್ಕೆ ಕೊವಿಡ್ ಲಸಿಕೆಯೇ ಕಾರಣ ಎಂಬ ಅಪವಾದಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ಎರಡು ವೈದ್ಯ ವಿಜ್ಞಾನ ಸಂಸ್ಥೆಗಳು ಸಂಶೋಧನೆಯನ್ನು ನಡೆಸಿದೆ.

ಈ ಸಂಶೋಧನೆಯಲ್ಲಿ ಕೊವಿಡ್ ಲಸಿಕೆಗೂ ಸಡನ್ ಹೃದಯಾಘಾತ ಮತ್ತು ಸಾವಿಗೂ ಸಂಬಂಧವಿಲ್ಲ ಎಂದು ತಿಳಿದುಬಂದಿದೆ. ಭಾರತದಲ್ಲಿ ನೀಡಲಾಗಿದ್ದ ಕೊವಿಡ್ ಲಸಿಕೆ ಸಂಪೂರ್ಣ ಸುರಕ್ಷಿತವಾಗಿತ್ತು. ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ವೈದ್ಯಕೀಯ ಸಂಸ್ಥೆಗಳು ಅಭಿಪ್ರಾಯಕ್ಕೆ ಬಂದಿವೆ.

ಹೃದಯಸ್ತಂಬನಕ್ಕೆ ಬೇರೆಯೇ ಕಾರಣಗಳಿರಬಹುದು. ವಂಶವಾಹೀ ಕಾರಣಗಳು, ಜೀವನಶೈಲಿ ಅಥವಾ ಅನಾರೋಗ್ಯದಿಂದಾಗಿ ಆಗಿರಬಹುದು. ಆದರೆ ಇದಕ್ಕೂ ಕೊವಿಡ್ ಲಸಿಕೆಗೂ ಸಂಬಂಧವಿಲ್ಲ. ಕೊವಿಡ್ ಲಸಿಕೆಯಿಂದ ಹೃದಯಸ್ತಂಬನವಾಗುತ್ತಿದೆ ಎಂದು ಸುದ್ದಿ ಹಬ್ಬಿಸುತ್ತಿರುವುದು ತಪ್ಪು ಕಲ್ಪನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ