ನೌಕಾಪಡೆಯಿಂದ ಭಾರತೀಯ ಮೀನುಗಾರರ ಬಂಧನ

ಸೋಮವಾರ, 29 ಆಗಸ್ಟ್ 2022 (10:58 IST)
ಕೊಲಂಬೋ : ಶ್ರೀಲಂಕಾದ ನೌಕಾಪಡೆಯು ಭಾನುವಾರ ಗಡಿ ದಾಟಿದ ಆರೋಪದ ಮೇರೆಗೆ 6 ಭಾರತೀಯ ಮೀನುಗಾರರನ್ನು ಬಂಧಿಸಿದೆ.

ಭಾರತೀಯ ಮೀನುಗಾರರು ಶ್ರೀಲಂಕಾದ ಜಲಪ್ರದೇಶಕ್ಕೆ ಹೋದ ಹಿನ್ನೆಲೆಯಲ್ಲಿ ಅವರ ಬೋಟ್ನ್ನು ವಶಪಡಿಸಿಕೊಂಡು, 6 ಮೀನುಗಾರರನ್ನು ಬಂಧಿಸಿದ್ದಾರೆ. ಇದು ಒಂದು ತಿಂಗಳ ಅವಧಿಯಲ್ಲಿ ಎರಡನೇ ಘಟನೆಯಾಗಿದೆ.

ಮನ್ನಾರ್ ದ್ವೀಪದ ವಾಯುವ್ಯ ಕರಾವಳಿಯಲ್ಲಿರುವ ವಸಾಹತು ಪ್ರದೇಶವಾದ ತಲೈಮನ್ನಾರ್ನಲ್ಲಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.

ತಲೈಮನ್ನಾರ್ನಲ್ಲಿ ನೌಕಾಪಡೆಯ ವಶದಲ್ಲಿರುವ ಮೀನುಗಾರರನ್ನು ಮನ್ನಾರ್ನಲ್ಲಿರುವ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ