ಒಂದೂವರೆ ದಶಕದ ಬಳಿಕ ಭಾರತದ ಪ್ರಧಾನಿ ನೈಜೀರಿಯಾಕ್ಕೆ: ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ

Sampriya

ಭಾನುವಾರ, 17 ನವೆಂಬರ್ 2024 (10:38 IST)
Photo Courtesy X
ನವದೆಹಲಿ: ನೈಜೀರಿಯಾ ಅಧ್ಯಕ್ಷರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ನೈಜೀರಿಯಾಕ್ಕೆ ಭೇಟಿ ನೀಡಿದ್ದಾರೆ. ಇದು 17 ವರ್ಷಗಳ ನಂತರ ಭಾರತೀಯ ಪ್ರಧಾನಮಂತ್ರಿಯೊಬ್ಬರ ನೈಜೀರಿಯಾ ಭೇಟಿಯಾಗಿದೆ.

ನರೇಂದ್ರ ಮೋದಿಯವರ 3 ದಿನಗಳ ವಿದೇಶ ಯಾತ್ರೆ ಶನಿವಾರ ಆರಂಭವಾಗಿದ್ದು, ನೈಜೀರಿಯಾಗೆ ಭೇಟಿ ನೀಡಿದ ಮೋದಿಯವರಿಗ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ. 2007ರ ಅಕ್ಟೋಬರ್‌ನಲ್ಲಿ ಮನಮೋಹನ್ ಸಿಂಗ್ ನೈಜೀರಿಯಾಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಇದೇ ಮೊದಲ ಭಾರೀ ಮೋದಿ ಅವರು ಭೇಟಿ ನೀಡುತ್ತಿದ್ದಾರೆ.

ನೈಜೀರಿಯಾಗೆ ಭೇಟಿ ನೀಡಿದ ಮೋದಿಯವರಿಗೆ ಅಲ್ಲಿನ ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ಕುರಿತ ಫೋಟೋಗಳನ್ನು ಮೋದಿಯವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನೈಜೀರಿಯಾದಲ್ಲಿರುವ ಭಾರತೀಯ ಸಮುದಾಯ ನೀಡಿದ ಅದ್ಧೂರಿ ಸ್ವಾಗತ ನೀಡಿದ್ದು ಹೃದಯ ಮುಟ್ಟಿತು ಎಂದು ಹೇಳಿದ್ದಾರೆ.

ಇನ್ನು ನೈಜೀರಿಯಾ ಭೇಟಿ ಬಳಿಕ ಮೋದಿಯವರು ಜಿ.20 ಶೃಂಗಕ್ಕಾಗಿ ನ.18 ಮತ್ತು 17ರಂದು ಬ್ರೆಜಿಲ್'ಗೆ ಭೇಟಿ ನೀಡಲಿದ್ದಾರೆ. ನಂತರ ನ.21ರವರೆಗೆ ಗಯಾನಾಕ್ಕೂ ಭೇಟಿ ನೀಡಲಿದ್ದಾರೆ. ಗಯಾನಾದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಮೋದಿಯವರು ಭಾಗವಹಿಸಲಿದ್ದು, ಇದೂ ಕೂಡ ತುಂಬಾ ವಿಶೇಷವಾಗಲಿದೆ. ಏಕೆಂದರೆ 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ