4ನೇ ಬೂಸ್ಟರ್ ಡೋಸ್‌ಗೆ ಇಸ್ರೇಲ್ ಅನುಮೋದನೆ

ಶುಕ್ರವಾರ, 31 ಡಿಸೆಂಬರ್ 2021 (09:31 IST)
ಇಸ್ರೇಲ್ : ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ನಲ್ಲಿ ಕೋವಿಡ್-19 ವಿರುದ್ಧದ ಲಸಿಕೆಯ 4ನೇ ಬೂಸ್ಟರ್ ನೀಡಲು ಇಸ್ರೇಲ್ ಅನುಮೋದನೆ ನೀಡಿದೆ.

ಕೊರೊನಾ ರೂಪಾಂತರಿ ಸೋಂಕಿನ ಪರಿಣಾಮ ತಡೆಗೆ ಬೂಸ್ಟರ್ ಡೋಸ್ ಅಗತ್ಯ ಎಂಬುದು ತಜ್ಞರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಜಗತ್ತಿನ ಹಲವು ದೇಶಗಳು ಈಗಾಗಲೇ ಕೋವಿಡ್-19 ಲಸಿಕೆಯ 3ನೇ ಡೋಸ್ ಆಗಿ ಬೂಸ್ಟರ್ ಡೋಸ್ ನೀಡುತ್ತಿವೆ.

ಕೆಲವು ದೇಶಗಳಲ್ಲಿ ಬೂಸ್ಟರ್ ಡೋಸ್ ನೀಡಿಕೆ ಈಗಾಗಲೇ ಚಾಲನೆ ಪಡೆದಿದೆ. ಇನ್ನೂ ಕೆಲವು ದೇಶಗಳಲ್ಲಿ ಶಿಫಾರಸ್ಸು ಮಾಡಲಾಗಿದೆ. ಈ ನಡುವೆಯೇ ಇಸ್ರೇಲ್ 4ನೇ ಬೂಸ್ಟರ್ ನೀಡಲು ಅನುಮೋದನೆ ನೀಡಿ ವಿಶ್ವದಲ್ಲೇ ಮೊದಲ ರಾಷ್ಟ್ರ ಎನಿಸಿಕೊಂಡಿದೆ.

ರೋಗನಿರೋಧಕ ಶಕ್ತಿ ಇರುವ ಜನರಿಗೆ ನಾವು ಕೋವಿಡ್ ಲಸಿಕೆಯ ನಾಲ್ಕನೇ ಬೂಸ್ಟರ್ ಡೋಸ್ (ಫೈಜರ್ ಅಭಿವೃದ್ಧಿಪಡಿಸಿರುವ ʼಪ್ಯಾಕ್ಸ್ಲೋವಿಡ್ʼ) ನೀಡಲು ಅನುಮೋದಿಸಿದ್ದೇವೆ ಎಂದು ಆರೋಗ್ಯ ಸಚಿವಾಲಯದ ವ್ಯವಸ್ಥಾಪಕ ನಿರ್ದೇಶಕ ನಾಚ್ಮನ್ ಆಶ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ