ಪ್ರಧಾನಿ ಮೋದಿ ಎಂದರೆ ಏನು ರೆಸ್ಪೆಕ್ಟ್: ಮೀಟಿಂಟ್ ಬಿಟ್ಟು ಓಡಿ ಬಂದ ನೆತನ್ಯಾಹು
ಮೋದಿ ಮತ್ತು ನೆತನ್ಯಾಹು ನಡುವಿನ ಸ್ನೇಹ ಎಲ್ಲರಿಗೂ ಗೊತ್ತು. ಇದೀಗ ಗಾಜಾದಲ್ಲಿ ಶಾಂತಿ ಮರುಸ್ಥಾಪನೆಗೆ ಒಪ್ಪಿಕೊಂಡಿದ್ದಕ್ಕೆ ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಕರೆ ಮಾಡಿದ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಮೋದಿ ಕರೆ ಮಾಡುವಾಗ ನೆತನ್ಯಾಹು ಭದ್ರತಾ ಸಿಬ್ಬಂದಿಗಳೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದರು.
ಮೋದಿ ಕರೆ ಮಾಡುತ್ತಾರೆ ಎಂಬ ಕಾರಣಕ್ಕೆ ಸಭೆಯನ್ನೂ ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ. ಮೋದಿ ಜೊತೆಗಿನ ಮಾತುಕತೆಗಾಗಿ ಭದ್ರತಾ ಸಂಪುಟ ಸಭೆಯನ್ನು ಕೆಲ ಕಾಲ ಮುಂದೂಡಲಾಯಿತು ಎಂದು ಇಸ್ರೇಲ್ ಪ್ರಧಾನಿಗಳ ಕಚೇರಿಯೇ ಪ್ರಕಟಣೆ ನೀಡಿತ್ತು.
ಇನ್ನು, ಇದೇ ವಿಚಾರವಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೂ ಮೋದಿ ಕರೆ ಮಾಡಿ ಅಭಿನಂದಿಸಿದ್ದಾರೆ. ಗಾಜಾದಲ್ಲಿ ಶಾಂತಿ ಮರುಸ್ಥಾಪನೆಗೆ ನಿಮ್ಮ ಪಾತ್ರ ಅಪಾರವಾದುದು ಎಂದು ಟ್ರಂಪ್ ರನ್ನು ಮೋದಿ ಅಭಿನಂದಿಸಿದ್ದಾರೆ ಎಂದು ತಿಳಿದುಬಂದಿದೆ.