ಭಾರತಕ್ಕೆ ಅವಮಾನವಾಗಲು ನಾವು ಬಿಡಲ್ಲ ಎಂದ ರಷ್ಯಾ ಅಧ್ಯಕ್ಷ ಪುಟಿನ್: ಟ್ರಂಪ್ ಗೂ ಚಾಟಿಯೇಟು
ಭಾರತ ಎಂದಿಗೂ ಅಮೆರಿಕಾದ ಒತ್ತಡಕ್ಕೆ ಮಣಿಯಲ್ಲ. ಅದೇ ರೀತಿ ಭಾರತಕ್ಕೆ ಅವಮಾನವಾಗಲು ನಾವೂ ಬಿಡಲ್ಲ ಎಂದಿದ್ದಾರೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು ಎಂದು ಟ್ರಂಪ್ ಭಾರತದ ಮೇಲೆ ಸುಂಕದ ಮೇಲೆ ಸುಂಕ ಹೇರಿ ಕಾಟ ಕೊಡುತ್ತಿದ್ದಾರೆ.
ಭಾರತ ನಮ್ಮಿಂದ ತೈಲ ಖರೀದಿಸುತ್ತಿರುವುದು ಅವರ ಆರ್ಥಿಕ ಲಾಭದ ಉದ್ದೇಶದಿಂದ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ಅಂಶವಿಲ್ಲ. ಭಾರತ ನಮ್ಮಿಂದ ತೈಲ ಖರೀದಿಸದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಮೋದಿ ಬುದ್ಧಿವಂತ ಮತ್ತು ಸಂವೇದನಾತ್ಮಕ ನಾಯಕ ಎಂದು ಪುಟಿನ್ ಹೇಳಿದ್ದಾರೆ.
ರಾಜಕೀಯ ನಾಯಕತ್ವಗಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಜನ ಗಮನಿಸುತ್ತಿರುತ್ತಾರೆ. ಯಾರ ಮುಂದೆಯೂ ಅವಮಾನವಾಗುವುದನ್ನು ಸಹಿಸಲ್ಲ. ಮೋದಿ ಯಾವತ್ತೂ ಅಂತಹ ನಿರ್ಧಾರ ಕೈಗೊಳ್ಳಲ್ಲ ಎಂದಿದ್ದಾರೆ.